ರೇಣುಕಾಸ್ವಾಮಿ ಕೊಲ್ಲೋದಕ್ಕೂ ಮೊದಲು ವಿಡಿಯೋ..? ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲು!

ರೇಣುಕಾಸ್ವಾಮಿ ಕೊಲೆ ಕೇಸ್ನ ಮತ್ತೊಂದು ರಹಸ್ಯ ಬಯಲು!
ನಟ ದರ್ಶನ್‌ಗೆ ಮನೆಯೂಟ..ಆದೇಶ ಕಾಯ್ದಿರಿಸಿದ ಕೋರ್ಟ್
ಮನೆ ಊಟ ಬೇಕಾ ?ಬೇಡವಾ ಎಂಬ ಬಗ್ಗೆ ವಾದ-ಪ್ರತಿವಾದ..!

Share this Video
  • FB
  • Linkdin
  • Whatsapp

ಮೂರೊತ್ತು ಬಿರಿಯಾನಿ ತಿಂದು, ಕೆಜಿ ಗಟ್ಟಲೇ ಪ್ರೊಟೀನ್ ಸೇವಿಸುತ್ತಿದ್ದವನು. ಇವತ್ತು ಮನೆಯೂಟಕ್ಕಾಗಿ ಅಂಗಲಾಚುತ್ತಿದ್ದಾನೆ. ಇದು ಡಿ ಗ್ಯಾಂಗ್‌ನ ಬಾಸ್ ದರ್ಶನ್ (Darshan) ಪರಿಸ್ಥಿತಿ. ಜೈಲು ಸೇರಿ 32 ದಿನಗಳಾಗಿರುವ ದರ್ಶನ್‌ಗೆ ಜೈಲೂಟ(Jail) ತಿಂದು ಸಾಕಾಗಿದೆ. 10 ಕೆ.ಜಿ ಕಡಿಮೆ ಕೂಡ ಆಗಿ ಬಿಟ್ಟಿದ್ದಾನಂತೆ. ಹೀಗಾಗಿ ನನಗೆ ಮನೆಯೂಟವೇ ಬೇಕು ಅಂತ ಕೋರ್ಟ್ ಮೆಟ್ಟಿಲೇರಿದ್ರು. ಇನ್ನೂ ಇದೇ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆದಿತ್ತು. ಕೋರ್ಟ್ ಇನ್ನೂ ಮೂರು ದಿನ ಜೈಲೂಟವೇ ತಿನ್ನಿ ಅಂತ ಹೇಳಿದೆ. ಇನ್ನೂ ಮೂರು ದಿನ ದರ್ಶನ್‌ಗೆ ಜೈಲೂಟವೇ ಗತಿಯಾಗಿದೆ. ಇದಿಷ್ಟು ಊಟದ ಕಥೆಯಾದ್ರೆ ಇನ್ನೂ ರೇಣುಕಾಸ್ವಾಮಿಯ ಕೊಲೆ ಕೇಸ್‌ನ(Renukaswamy murder case) ತನಿಖೆಯ ಬಗ್ಗೆ ಹೇಳೋದು ಬಾಕಿ ಇದೆ. ಮನೆಯೂಟದ ಕಥೆ ಒಂದು ಕಡೆಯಾದ್ರೆ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನ ಕೊಲ್ಲೋದಕ್ಕೂ ಮೊದಲು ಮಾಡಿದ್ದ ಒಂದು ಪ್ಲಾನ್ ಈಗ ಬಯಲಾಗಿದೆ. ರೇಣುಕಾಸ್ವಾಮಿಯನ್ನ ಕೊಲ್ಲೋದಕ್ಕೂ ಮೊದಲು ಆತನಿಂದ ಕ್ಷಮಾಪಣೆಯ ವಿಡಿಯೋ ಮಾಡಲು ಎಲ್ಲಾ ತಯಾರಿ ನಡೆಸಿದ್ರಂತೆ. ಆದ್ರೆ ಆತ ತೀರ ಅಸ್ವಸ್ಥನ್ನಾಗಿದ್ರಿಂದ ವಿಡಿಯೋ ಕಾರ್ಯಕ್ರಮವನ್ನ ಮರುದಿನಕ್ಕೆ ಇಟ್ಟುಕೊಂಡಿದ್ದರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ದರ್ಶನ್‌ಗೆ ಮನೆಯೂಟವೋ..ಜೈಲೂಟವೋ..? ಮನೆ ಊಟ ಕೇಳಿ ಸಲ್ಲಿಸಿದ್ದ ಅರ್ಜಿ ತೀರ್ಪು ಜುಲೈ 25ಕ್ಕೆ ಮುಂದೂಡಿಕೆ !

Related Video