Asianet Suvarna News Asianet Suvarna News

ಇದು ಜನವಿರೋಧಿ, ಸತ್ತು ಹೋಗಿರೋ ಸರ್ಕಾರ, ಜನರೇ ದಫನ್ ಮಾಡೋ ದಿನ ಬರುತ್ತೆ: ಸಿಟಿ ರವಿ

ಜನವಿರೋಧಿ ಸರ್ಕಾರ ಅನ್ನೋಕೆ ಮತ್ಯಾವ ಸರ್ಟಿಫಿಕೇಟ್ ಅಗತ್ಯ ಇಲ್ಲ. ಮೋದಿ ಪೆಟ್ರೋಲ್ ರೇಟ್ ಜಾಸ್ತಿ ಮಾಡಿದಾಗ ಸಿಎಂ ಸ್ಕೂಟಿ ಶವದ ಅಣುಕು ಪ್ರದರ್ಶನ ಮಾಡಿದ್ರು.ಈಗ ಯಾರನ್ನ ಹೊತ್ಕಂಡ್ ಹೋಗಬೇಕು ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರು: ರಾಜ್ಯ ಸರ್ಕಾರ ಬೆಲೆ ಏರಿಕೆ‌ಯನ್ನೇ ನೀತಿ ಮಾಡ್ಕೊಂಡಿದೆ. ಮೂಗು ಹಿಡಿದ್ರೆ ಬಾಯಿ ಬಿಡ್ಬೇಕಾಗುತ್ತೆ ಅಂತಾರಲ್ಲ ಹಾಗೆ. ಪೆಟ್ರೋಲ್-ಡಿಸೇಲ್ ಬೆಲೆ( Petrol diesel rate Rises) ಏರಿಕೆಯಾದ್ರೆ ಬೆಲೆ ಏರಿಕೆಗೆ ಲೈಸನ್ಸ್ ಕೊಟ್ಟಂಗೆ. ಕಷ್ಟದಲ್ಲಿರೋ ಜನರಿಗೆ ಸರ್ಕಾರ ಬೆಲೆ ಏರಿಕೆ ಬರೆ ಹಾಕಿದೆ ಎಂದು ಚಿಕ್ಕಮಗಳೂರಿನಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ(CT Ravi) ಕಿಡಿಕಾರಿದ್ದಾರೆ. ಜನವಿರೋಧಿ ಸರ್ಕಾರ(Congress government) ಅನ್ನೋಕೆ ಮತ್ಯಾವ ಸರ್ಟಿಫಿಕೇಟ್ ಅಗತ್ಯ ಇಲ್ಲ. ಮೋದಿ ಪೆಟ್ರೋಲ್ ರೇಟ್ ಜಾಸ್ತಿ ಮಾಡಿದಾಗ ಸಿಎಂ ಸ್ಕೂಟಿ ಶವದ ಅಣುಕು ಪ್ರದರ್ಶನ ಮಾಡಿದ್ರು. ಈಗ ಯಾರನ್ನ ಹೊತ್ಕಂಡ್ ಹೋಗಬೇಕು, ನಿಮ್ಮ ಸರ್ಕಾರವನ್ನೇ ಹೊತ್ಕಂಡ್ ಹೋಗಬೇಕಾ ? ಇದು ಜನವಿರೋಧಿ ಸರ್ಕಾರ, ಸತ್ತು ಹೋಗಿರೋ ಸರ್ಕಾರ, ಜನರೇ ಈ ಸರ್ಕಾರವನ್ನ ದಫನ್ ಮಾಡೋ ದಿನ ಬರುತ್ತೆ. ಚುನಾವಣೆ ಸೋಲಿನ ಬಳಿಕ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ರಾಜಕೀಯ ಪಕ್ಷ, ನಾಯಕರ ಮೇಲೆ ಸೇಡು ಆಯ್ತು, ಈಗ ಜನಸಾಮಾನ್ಯರ ಮೇಲೆ. ಕೂಡಲೇ ಬೆಲೆ ಏರಿಕೆ ಅದೇಶವನ್ನ ಹಿಂಪಡೆಯಬೇಕು. ನೀವು ಮಾಡಿರೋದು ಬೆಲೆ ಏರಿಕೆ, ಲೂಟಿ ಎರಡೇ... ಮಾಡಿದ್ದೀರಾ ? ಓಲೈಕೆ ರಾಜಕಾರಣಕ್ಕೆ ಗ್ಯಾರಂಟಿ ಆಸೆ ತೋರಿಸಿದ್ರಿ, ಅದು ಧಕ್ಕದಿದ್ದಾಗ ಬೆಲೆ ಏರಿಕೆ ಮಾಡಿದ್ದೀರಾ? ನಾಚಿಕೆ, ಮಾನ, ಮರ್ಯಾದೆ ಅನ್ನೋದಾದ್ರೆ ಯಾವುದನ್ನ ಇಟ್ಕೊಂಡು ಇದನ್ನ ಮಾಡಿದ್ದೀರಾ ಎಂದು ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ  ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ:  ಬೆಳಗಾವಿಯಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆ..ತನಿಖೆ ವೇಳೆ ನಕಲಿ ವೈದ್ಯನ ಕರಾಳ ಮುಖ ಬಯಲು!

Video Top Stories