Asianet Suvarna News Asianet Suvarna News
breaking news image

ಬೆಳಗಾವಿಯಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆ..ತನಿಖೆ ವೇಳೆ ನಕಲಿ ವೈದ್ಯನ ಕರಾಳ ಮುಖ ಬಯಲು!

ನಕಲಿ ವೈದ್ಯ ಅಬ್ದುಲ್ ಲಾಡಖಾನ್‌ನ ಬೆಳಗಾವಿಯಲ್ಲಿ ಭ್ರೂಣ ಹತ್ಯೆ ಮಾಡಿ, ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಬೆಳಗಾವಿ: ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ನಕಲಿ ವೈದ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ. ಜೂನ್ 10 ರಂದು ಮಾಳಮಾರುತಿ ಠಾಣೆ ಪೊಲೀಸರಿಂದ ನಕಲಿ ವೈದ್ಯ ಸೇರಿ ಐವರನ್ನು ಖೆಡ್ಡಾಕ್ಕೆ ಕೆಡವಲಾಗಿತ್ತು. ಅಲ್ಲದೇ ಈ ನಕಲಿ ವೈದ್ಯ ಅಬ್ದುಲ್ ಲಾಡಖಾನ್‌ನ(Dr.Abdul Ladakhan) ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ. ಪ್ರಕರಣ ಬೆನ್ನತ್ತಿರುವ ಬೆಳಗಾವಿ(Belagavi) ಪೊಲೀಸರಿಗೆ ಬೆಚ್ಚಿಬೀಳಿಸುವ ಮಾಹಿತಿಯೊಂದು ದೊರೆತಿದೆ. ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಭ್ರೂಣ ಹತ್ಯೆ(Foeticide killing) ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ತನ್ನ ಕ್ಲಿನಿಕ್‌ನಲ್ಲಿ ಹಲವು ಭ್ರೂಣಗಳ ಹತ್ಯೆ ಮಾಡಿದ್ದಾನೆ. ಭ್ರೂಣ ಹತ್ಯೆಗೈದು ತನ್ನ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸ್ ತನಿಖೆ ವೇಳೆ ಭ್ರೂಣ ಹತ್ಯೆ ಮಾಡಿರುವುದಾಗಿ ಲಾಡಖಾನ್ ತಪ್ಪೊಪ್ಪಿಕೊಂಡಿದ್ದಾನೆ. ಡಿಸಿ ನಿತೇಶ ಪಾಟೀಲ್ ಸೂಚನೆ ಮೇರೆಗೆ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದೆ. ಪೊಲೀಸರು, ಆರೋಗ್ಯ ಇಲಾಖೆ, ಎಫ್ ಎಸ್ ಎಲ್ ತಂಡದಿಂದ ಶೋಧ ಕಾರ್ಯ ಮಾಡಲಾಗಿದೆ. ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಭ್ರೂಣಗಳನ್ನು ಹೂಳಲಾಗಿದೆ. ಕಾರ್ಯಾಚರಣೆ ವೇಳೆ ಮೂರು ಭ್ರೂಣಗಳ ಅವಶೇಷಗಳು ಪತ್ತೆಯಾಗಿದ್ದು, ಅವಶೇಷಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆರೋಪಿಗಳ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ. 

ಇದನ್ನೂ ವೀಕ್ಷಿಸಿ:  CT Ravi on Darshan case: ನಟ ದರ್ಶನ್‌ ಮನಸ್ಥಿತಿ ಅಷ್ಟು ಕ್ರೂರ ಎಂದು ಯಾರೂ ಭಾವಿಸಿರಲಿಲ್ಲ: ಸಿಟಿ ರವಿ

Video Top Stories