ವಕೀಲರ ಸಮ್ಮೇಳನಕ್ಕೆ ಡಿಕೆಶಿಗೆ ಆಹ್ವಾನ ವಿವಾದ: ಡಿಸಿಎಂ ಹೆಸರು ಕೈಬಿಟ್ಟ ವಕೀಲರ ಸಂಘ
ವಿವಾದದ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದ ಡಿಕೆಶಿ
ಇದೀಗ ಆಹ್ವಾನ ಪತ್ರಿಕೆಯಿಂದಲು ಹೆಸರು ಕೈ ಬಿಟ್ಟ ವಕೀಲರ ಪರಿಷತ್
10ನೇ ವಕೀಲರ ಸಮ್ಮೇಳನ ಉದ್ಘಾಟಿಸಲಿರುವ ಸಿಎಂ ಸಿದ್ದರಾಮಯ್ಯ
ಮೈಸೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನಿಂದ ಸಮ್ಮೇಳನ ಆಯೋಜಿಸಲಾಗಿದ್ದು, ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar) ಅವರಿಗೆ ಆಹ್ವಾನ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಆಹ್ವಾನ ಪತ್ರಿಕೆಯಿಂದ ಡಿಕೆಶಿ ಅವರ ಹೆಸರನ್ನು ವಕೀಲರ ಪರಿಷತ್(Lawyers) ಕೈಬಿಟ್ಟಿದೆ. ವಿವಾದದ ಹಿನ್ನೆಲೆ ಡಿ.ಕೆ. ಶಿವಕುಮಾರ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಸಹ ಹೇಳಿದ್ದರು. ಮೊದಲು ಆಹ್ವಾನ ಪತ್ರಿಕೆಯಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಇತ್ತು. ಆಗಸ್ಟ್ 12ರಂದು ಮೈಸೂರಿನಲ್ಲಿ(Mysore) ಈ ಸಮ್ಮೇಳನ ನಡೆಯಲಿದೆ. ಕ್ರಿಮಿನಲ್ ಕೇಸ್ ಇರುವವರ ಜತೆ ನ್ಯಾಯಾಧೀಶರು ಭಾಗಿಯಾಗುವುದು, ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ ಎಂದು ಸುರೇಶ್ ಕುಮಾರ್(Suresh kumar) ಹೇಳಿದ್ದರು. ಮಾಜಿ ಸಚಿವ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಆಹ್ವಾನ ಪತ್ರಿಕೆಯಿಂದ ಹೆಸರನ್ನು ವಕೀಲರ ಪರಿಷತ್ ಕೈ ಬಿಟ್ಟಿದೆ. 10ನೇ ಸಮ್ಮೇಳನವನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಇದನ್ನೂ ವೀಕ್ಷಿಸಿ: ಹಾಡಹಗಲೇ ಜೆಡಿಎಸ್ ಮುಂಂಡನ ಕೊಚ್ಚಿ ಕೊಲೆ: ಇದಕ್ಕೆ ಕಾರಣವೇನು ಗೊತ್ತಾ ?