ಚಾಮುಂಡಿಯ ಸೀರೆ ಕದ್ದವರನ್ನು ಬಯಲಿಗೆಳೆದ ಸ್ನೇಹಮಯಿ ಮೇಲೆಯೇ ರಿವೇಂಜ್‌ಗೆ ಇಳಿದ ಸರ್ಕಾರ!
ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಸರ್ಕಾರ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದು, ಹೈಕೋರ್ಟ್ ಕೃಷ್ಣಗೆ ತಡೆ ನೀಡಿದೆ. ಚಾಮುಂಡಿ ಬೆಟ್ಟದಲ್ಲಿ ಸೀರೆ ಕಳ್ಳತನ ಪ್ರಕರಣದಲ್ಲಿ ತಮ್ಮ ಹೋರಾಟ ಹತ್ತಿಕ್ಕಲು ಸುಳ್ಳು ದೂರು ದಾಖಲಿಸಲಾಗಿದೆ ಎಂದು ಕೃಷ್ಣ ಆರೋಪಿಸಿದ್ದಾರೆ.
ಮೈಸೂರು (ಡಿ.18): ಸಿಎಂ ಸಿದ್ದರಾಮಯ್ಯ ಬುಡಕ್ಕೆ ಮುಡಾ ಕೇಸ್‌ನ ಸಂಕಷ್ಟವನ್ನು ಇರಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಲು ಪೊಲೀಸ್ ಇಲಾಖೆಯ ಮೂಲಕ ಟ್ರ್ಯಾಕ್‌ಗೆ ಇಳಿದಿದ್ದ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಕೆಆರ್ ಪೊಲೀಸ್ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ. ಚಾಮುಂಡಿ ಬೆಟ್ಟದಲ್ಲಿ ಸೀರೆ ಕಳ್ಳತನ ವಿಚಾರದಲ್ಲಿ ನನ್ನ ಹೋರಾಟ ಹತ್ತಿಕ್ಕಲು ಹೀಗೆ ಸುಳ್ಳು ದೂರು ದಾಖಲಿಸಿ ಬಂಧಿಸಲು ಪ್ಲಾನ್ ಮಾಡಿದ್ದಾರೆ. ಮೈಸೂರು ಜಿಲ್ಲೆ ಸಿದ್ದರಾಮಯ್ಯನವರ ತವರು ಜಿಲ್ಲೆ. ಅಲ್ಲಿರುವಂಥ ಪೊಲೀಸ್ ಅಧಿಕಾರಿಗಳು ಅವರ ಕೃಪಕಟಾಕ್ಷದಿಂದ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದಿದ್ದಾರೆ.
'ನಾನೀಗಲೂ ಪವಿತ್ರಾ ಗೌಡನ ಪ್ರೀತಿಸ್ತೀನಿ..ನನ್ನ ಜೊತೆ ಬಂದ್ರೆ ಜೀವನ ನಡೆಸಲು ರೆಡಿ'
ಮೈಸೂರಿನಲ್ಲಿ ನಡೆಯುವ ಎಲ್ಲ ಅಪರಾಧ ಚಟುವಟಿಕೆಗಳಿಗೆ ಡಿಸಿಪಿ ಮುತ್ತುರಾಜ್ ಪಿತಾಮಹರಾಗಿದ್ದಾರೆ. ಅದಕ್ಕಾಗಿ ಅವರ ಕೊಠಡಿಗೆ ಸಿಸಿಟಿವಿ ಹಾಕಿಲ್ಲ. ನನ್ನ ಜೀವ ಹೋದ್ರೂ ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ತರುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.