'ನಾನೀಗಲೂ ಪವಿತ್ರಾ ಗೌಡನ ಪ್ರೀತಿಸ್ತೀನಿ..ನನ್ನ ಜೊತೆ ಬಂದ್ರೆ ಜೀವನ ನಡೆಸಲು ರೆಡಿ'

ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ಪವಿತ್ರಾ ಅವರೊಂದಿಗೆ ಮತ್ತೆ ಜೀವನ ನಡೆಸಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ಜೊತೆಗಿನ ಸಂಬಂಧದ ಬಗ್ಗೆ ತಮಗೆ ತಿಳಿದಿಲ್ಲ ಎಂದೂ ಅವರು ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆಯಲ್ಲಿ ಪವಿತ್ರಾ ಗೌಡ ಅವರ ಪಾತ್ರದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.18): ನಾನು ಪವಿತ್ರಾನ ಈಗಲೂ ಪ್ರೀತಿ ಮಾಡ್ತೇನೆ. ಆಕೆ ನನ್ನ ಜೊತೆ ಬಂದ್ರೆ ನಾನು ಜೀವನ ನಡೆಸೋಕೆ ರೆಡಿ. ದರ್ಶನ್ ಜೊತೆ ಲಿವ್ ಇನ್ ನಲ್ಲಿ ಇರೋದನ್ನು ನಾನು ಯಾವತ್ತೂ ನೋಡಿಲ್ಲ. ಜನರ ಬಾಯನ್ನು ಮುಚ್ಚಿಸೋಕೆ ಆಗೋದಿಲ್ಲ ಎಂದು ಪವಿತ್ರಾ ಗೌಡ ಮೊದಲ ಪತಿ ಸಂಜಯ್‌ ಸಿಂಗ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕಾಕತಾಳೀಯ ಎಂಬಂತೆ ಇವತ್ತು ನಾನು ಬೆಂಗಳೂರಿನಲ್ಲಿ ಇದ್ದೇನೆ. ಇವತ್ತೇ ಪವಿತ್ರಾ ಗೌಡಗೆ ಬೇಲ್ ಸಿಕ್ಕಿ ಹೊರಗಡೆ ಬಂದಿದ್ದಾಳೆ. ನನಗೆ ಬಂದ ತಕ್ಷಣ ಒಳ್ಳೆ ಸುದ್ದಿ ಸಿಕ್ಕಿದೆ. ಕಾಕತಾಳೀಯ ಇದು. ಪವಿತ್ರಾಗೌಡ ಅರೆಸ್ಟ್ ಆಗಿದ್ದು, ಕೇಸ್ ಬಗ್ಗೆ ನಾನು ಯೂಟ್ಯೂಬ್ ನಲ್ಲಿ ನೋಡ್ತಾ ಇದ್ದೆ. ನಾನು ಈ ವಿಚಾರಕ್ಕೆ ಇವತ್ತು ಬಂದಿದ್ದಲ್ಲ. ನಾನು ಡಿವೋರ್ಸ್ ಆದ್ಮೇಲೆ ಫೋನಲ್ಲೂ ಮಾತಾಡಿಲ್ಲ. ಜೈಲಿಗೆ ಹೋದಾಗ ಅನೇಕರು ನನಗೆ ಫೋನ್ ಮಾಡಿದ್ದರು. ನಾವು ಮದುವೆ ಆಗಿದ್ದು 2009ನಲ್ಲಿ ಡಿವೋರ್ಸ್ 2013ನಲ್ಲಿ ಸಿಕ್ಕಿತ್ತು. ನಮ್ಮದು ಡಿವೋರ್ಸ್ ಆಗಿದೆ, ಪೇಪರ್ನಲ್ಲಿ ಆಗಿದೆ. ಅವರು ಎಲ್ಲಿದ್ದರೂ ಚೆನ್ನಾಗಿರಲಿ ಅಂತ ಬಯಸ್ತೀನಿ. ಡಿವೋರ್ಸ್ ಆಗೋದಕ್ಕೆ ಹಲವು ಕಾರಣವಿತ್ತು. ನಮಗೆ ಟೈಮಿಂಗ್ ಮಿಸ್ ಮ್ಯಾಚ್ ಆಗ್ತಿತ್ತು. ಸಾಕಷ್ಟು ವಿಚಾರದಲ್ಲಿ ಭಿನ್ನಾಭಿಪ್ರಾಯ ಇತ್ತು. ದರ್ಶನ್ ಜೊತೆ ರಿಲೇಶನ್ ಶಿಪ್ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇರೋ ಟೈಂನಲ್ಲಿ ದರ್ಶನ್ ಯಾವತ್ತೂ ಬಂದಿಲ್ಲ ಎಂದು ಹೇಳಿದ್ದಾರೆ.

ಹೈಕೋರ್ಟ್‌ಗೆ ಸೂಪರ್‌ಹಿಟ್‌ 'ಸರ್ಜರಿ' ಫಿಲ್ಮ್‌ ತೋರಿಸಿದ್ದ ಆರೋಪಿ ದರ್ಶನ್‌ ಡಿಸ್ಚಾರ್ಜ್.!

ರೇಣುಕಾಸ್ವಾಮಿ ಕೊಲೆಯಲ್ಲಿ ಪವಿತ್ರಾಗೌಡ ಇನ್ವಾಲ್ಮೆಂಟ್ ಇದೆ ಅಂತ ನಾನು ಹೇಳಲ್ಲ. ಈ ಕೊಲೆ ಆಕ್ಸಿಡೆಂಟಲ್ ಆಗಿ ಆಗಿದೆ. ಪವಿತ್ರಾ ಇನ್ವಾಲ್ಮೆಂಟ್ ಇದ್ರಲ್ಲಿ ಜಾಸ್ತಿ ಇಲ್ಲ. ಆದರೂ ಎ1 ಮಾಡಿದ್ದಾರೆ. ದರ್ಶನ್ ಜೊತೆ ರಿಲೇಶನ್ ಶಿಪ್ ಬಗ್ಗೆ ಸುಮಾರು ಜನ ಹೇಳ್ತಾರೆ, ನಾನು ಕಣ್ಣಾರೆ ನೋಡಿಲ್ಲ.ಕೋರ್ಟ್ ನಲ್ಲಿ ಲಿವ್ ಇನ್ ಬಗ್ಗೆ ಹೇಳಿರೋದು ನಂಗೆ ಗೊತ್ತಿಲ್ಲ. ನಾನು ನನ್ನ ಮಗಳ ಜೊತೆ ಮುಂಚೆ ಮಾತಾಡಿದ್ದೆ. ಪವಿತ್ರಾ ಜೈಲು ಹೋಗೋ ಟೈಂಲ್ಲಿಯೂ ಮಾತಾಡಿದ್ದೆ. ಮಗಳು ಸ್ಟ್ರಾಂಗ್ ಆಗಿ ತಗೊಂಡಿದಾಳೆ, ಶಿ ಈಸ್ ಬೋಲ್ಡ್ ಗರ್ಲ್. ಎಷ್ಟಾದ್ರೂ ಅವಳು ನನ್ ಮಗಳಲ್ವಾ? ಎಂದು ಸಂಜಯ್‌ ಸಿಂಗ್‌ ಹೇಳಿದ್ದಾರೆ.

Related Video