
ಏನೇ ಆಗ್ಲಿ, ಮೈತ್ರಿ ಇರಲಿ! ಕಾಂಗ್ರೆಸ್- ಜೆಡಿಎಸ್ ಮಹತ್ವದ ನಿರ್ಧಾರ
ರಾಜಕೀಯವೇ ಹಾಗೇ, ಯಾವಾಗ, ಯಾರು, ಏನು ಮಾಡ್ತಾರೆ ಎಂದು ಹೇಳೋದೆ ಕಷ್ಟ. ವಿಧಾನಸೌಧದ ಮಟ್ಟಿಗೆ ದೋಸ್ತಿ ಮಾಡಿಕೊಂಡು, ಬೇರೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮತ್ತೆ ಮೈತ್ರಿ ಮುಂದುವರಿಸಲು ನಿರ್ಧರಿಸಿವೆ. ಇಲ್ಲಿದೆ ಡೀಟೆಲ್ಸ್....
ಬೆಂಗಳೂರು (ಸೆ.30): ರಾಜಕೀಯವೇ ಹಾಗೇ, ಯಾವಾಗ, ಯಾರು, ಏನು ಮಾಡ್ತಾರೆ ಎಂದು ಹೇಳೋದೆ ಕಷ್ಟ. ವಿಧಾನಸೌಧದ ಮಟ್ಟಿಗೆ ದೋಸ್ತಿ ಮಾಡಿಕೊಂಡು, ಬೇರೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮತ್ತೆ ಮೈತ್ರಿ ಮುಂದುವರಿಸಲು ನಿರ್ಧರಿಸಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳೆದ ವಿಧಾನಸಭೆ ಚುನಾವಣೆ (2018) ಬಳಿಕ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್, ಸರ್ಕಾರ ಪತನವಾದ ಬಳಿಕ ಮೈತ್ರಿ ಮುರಿದುಕೊಂಡಿವೆ.
ಪರಸ್ಪರ ಹಳಸಿದ ಸಂಬಂಧಗಳು, ನಾಯಕ-ಕಾರ್ಯಕರ್ತರ ಒಳಗೊಳಗೆ ತಿಕ್ಕಾಟಗಳು, ಶಾಸಕರ ತಾರತಮ್ಯದ ಆರೋಪಗಳು.... ಹೀಗೆ ಬೇರೆ ಬೇರೆ ಕಾರಣಗಳಿಂದ ಮೈತ್ರಿಯಲ್ಲಿ ಬಿರುಕುಂಟಾಗಿತ್ತು. ಮುಂಬರುವ ಉಪ-ಚುನಾವಣೆಯಲ್ಲಿ ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಲಿವೆ.