Asianet Suvarna News Asianet Suvarna News

ಚಾಮರಾಜನಗರ ಕಾರಾಗೃಹದಲ್ಲಿ ಖೈದಿಗಳಿಗೆ ಕಂಪ್ಯೂಟರ್ ತರಬೇತಿ: SSLC, ಮೇಲ್ಪಟ್ಟ ವಿದ್ಯಾರ್ಹತೆಯುಳ್ಳವರು ಆಯ್ಕೆ

ರಾಜ್ಯದಲ್ಲೇ ಮೊದಲ ಬಾರಿ ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡಲಾಗ್ತಿದೆ. ಚಾಮರಾಜನಗರದಲ್ಲಿ ವಿನೂತನ ಯೋಜನೆಗೆ ಚಾಲನೆ ಸಿಕ್ಕಿದೆ. ಕೈದಿಗಳಿಗೇಕೆ ಕಂಪ್ಯೂಟರ್ ಶಿಕ್ಷಣ? ಚಾಮರಾಜನಗರದಲ್ಲೇ ಈ ಯೋಜನೆಗೆ  ಚಾಲನೆ ಸಿಕ್ಕಿದ್ಯಾಕೆ ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
 

ಖೈದಿಗಳು.. ಅಂದ್ರೆ ಯಾವುದೋ ತಪ್ಪು ಮಾಡಿ ಶಿಕ್ಷೆ ಅನುಭವಿಸಲು ಬಂದವರು. ಕೆಲವರು ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ರೆ, ಮತ್ತೆ ಕೆಲವರು ಕೆಟ್ಟ ಗಳಿಗೆಯಲ್ಲಿ ತಪ್ಪುಮಾಡಿ ಜೈಲು ಸೇರಿರ್ತಾರೆ. ಆದ್ರೆ, ಇಂಥ ಖೈದಿಗಳಿಗೆ(prisoners) ಮನರಿವರ್ತನೆ ಮಾಡುವ ಕೆಲಸಗಳು ನಡೆಯುತ್ತವೆ. ಈ ಮಧ್ಯೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ(Chamarajanagar) ಖೈದಿಗಳಿಗೆ ವಿಶೇಷ ಯೋಜನೆಗೆ ಚಾಲನೆ ನೀಡಲಾಗಿದೆ. ಇನ್ಫೋಸಿಸ್ ಜೊತೆ ಕೈಜೋಡಿಸಿದ ಜಿಲ್ಲಾಡಳಿತ ಕಾರಾಗೃಹದಲ್ಲೇ(Jail) ಖೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಮುಂದಾಗಿದೆ. ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಇದೆ. ಜೈಲಲ್ಲಿರೋ ಖೈದಿಗಳಿಗೂ ಕಂಪ್ಯೂಟರ್ ಶಿಕ್ಷಣ ಸಿಕ್ಕರೆ ಅವರ ಬಾಳಲ್ಲೂ ಬದಲಾವಣೆ ಬರಬಹುದು. ಇದ್ರಿಂದ ಜೈಲು ಶಿಕ್ಷೆ ಮುಗಿದ ಬಳಿಕ ಖೈದಿಗಳು ಜೀವನ ರೂಪಿಸಿಕೊಳ್ಳೋಕೆ ನೆರವಾಗುತ್ತೆ ಅನ್ನೋ ಉದ್ದೇಶಕ್ಕೆ ಕಂಪ್ಯೂಟರ್ ಶಿಕ್ಷಣ(computer education) ಕೊಡಲಾಗ್ತಿದೆ. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ವಿಶೇಷ ಮುತೂವರ್ಜಿಯಿಂದ ಇಂಥದ್ದೊಂದು ಯೋಜನೆಗೆ ಚಾಲನೆ ಸಿಕ್ಕಿದೆ. ಮೈಸೂರಿನ ಇನ್ಫೋಸಿಸ್, ರೋಟರಿ, ಪಂಚಶೀಲ ಸಹಯೋಗದೊಂದಿಗೆ ಕಂಪ್ಯೂಟರ್ ತರಬೇತಿ ನೀಡಲಾಗ್ತಿದೆ. ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‌ನಲ್ಲಿ 10 ಕಂಪ್ಯೂಟರ್, ಪ್ರಿಂಟರ್ ಮತ್ತು ಸುಲಭವಾಗಿ ಕಂಪ್ಯೂಟರ್ ಅರ್ಥೈಸಿಕೊಳ್ಳಲು ಕನ್ನಡ ಕಿರುಪುಸ್ತಕ ನೀಡಲಾಗಿದೆ. ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಸದ್ಯ 130ಕ್ಕೂ ಹೆಚ್ಚು ಖೈದಿಗಳಿದ್ದಾರೆ. ಆದ್ರೆ ಎಸ್ಎಸ್ಎಲ್‌ಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆಯುಳ್ಳ 38 ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಆಯ್ಕೆ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಏಷ್ಯಾನೆಟ್‌ ಸುವರ್ಣನ್ಯೂಸ್ ರಿಯಾಲಿಟಿ ಚೆಕ್: ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಗುಣಮಟ್ಟ ಕಳಪೆ !

Video Top Stories