ಏಷ್ಯಾನೆಟ್‌ ಸುವರ್ಣನ್ಯೂಸ್ ರಿಯಾಲಿಟಿ ಚೆಕ್: ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಗುಣಮಟ್ಟ ಕಳಪೆ !

ಅಂಗನವಾಡಿಗೆ ಕಳಪೆ ಆಹಾರ ಪೂರೈಕೆ ಆರೋಪದ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ. ಈ ವೇಳೆ ಮಕ್ಕಳಿಗೆ ನೀಡ್ತಿರೋ ಕೆಲ ಆಹಾರ ಪದಾರ್ಥ ಕಳಪೆಯಾಗಿರುವುದು ಬಯಲಾಗಿದೆ.
 

First Published Nov 20, 2023, 9:51 AM IST | Last Updated Nov 20, 2023, 9:51 AM IST


ಅಪೌಷ್ಟಿಕತೆ ಸಮಸ್ಯೆ ನಿವಾರಿಸಲು ಅಂಗನವಾಡಿಗೆ(Anganwadis) ಬರುವ ಮಕ್ಕಳಿಗೆ ಸರ್ಕಾರ ಪೌಷ್ಠಿಕ ಆಹಾರ(Food) ನೀಡುತ್ತದೆ. ಆದ್ರೆ ಅದೇ ಆಹಾರ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಬದಲು ಅನಾರೋಗ್ಯ ಉಂಟು ಮಾಡುವ ಆತಂಕ ಕಾಡ್ತಿದೆ. ಕಾರಣ ಅಂಗನವಾಡಿಗಳಿಗೆ ಪೂರೈಕೆ ಮಾಡ್ತಿರೋ ಆಹಾರ ಪದಾರ್ಥಗಳ ಪೈಕಿ ಕೆಲ ಪದಾರ್ಥಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಆರೋಪದ ಬೆನ್ನಲ್ಲೇ ಬಾಗಲಕೋಟೆಯ(Bagalkot) ಅಂಗನವಾಡಿ ಕೇಂದ್ರಗಳಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ರಿಯಾಲಿಟಿ ಚೆಕ್ ನಡೆಸ್ತು. ಈ ವೇಳೆ ಮಕ್ಕಳಿಗೆ ನೀಡ್ತಿರೋ ಗೋಧಿ ರವೆ ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡುಬಂತು. ಈ ಗೋಧಿ ರವೆ ಕಳಪೆಯಾಗಿದ್ದು, ಇಂಥ ಕಳಪೆ ಆಹಾರ ಪದಾರ್ಥ ಸೇವಿಸಿದ್ರೆ ಮಕ್ಕಳು ಅನಾರೋಗ್ಯ ಪೀಡಿತರಾಗುವುದರಲ್ಲಿ ಅನುಮಾನವೇ ಇಲ್ಲ. ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಬಾಗಲಕೋಟೆ ಅಂಗನವಾಡಿಗಳಿಗೆ ಎಂಎಸ್ಪಿಪಿಸಿ ಮೂಲಕ ಆಹಾರ ಪದಾರ್ಥಗಳ ಪೂರೈಕೆಯಾಗ್ತಿದೆ. ಶೇಂಗಾ, ಹೆಸರು ಬೇಳೆ, ಬೆಲ್ಲ ಗುಣಮಟ್ಟದಿಂದ ಕೂಡಿವೆ. ಆದ್ರೆ ಗೋಧಿ ರವೆ ಸೇರಿದಂತೆ ಇನ್ನಿತರ ಪದಾರ್ಥಗಳು ಕಳಪೆಯಾಗಿವೆ. ಮಕ್ಕಳ(Children) ಆಹಾರಕ್ಕಾಗಿ ಕೋಟಿ ಕೋಟಿ ಹಣ ಖರ್ಚು ಮಾಡುವ ಸರ್ಕಾರ ಅದರ ಗುಣಮಟ್ಟದ ಬಗ್ಗೆಯೂ ಗಮನಹರಿಸಬೇಕಿದೆ. ಗುಣಮಟ್ಟದ ಆಹಾರ ಸಿಗದಿದ್ರೆ ಮಕ್ಕಳ ಬೆಳವಣಿಗೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇನ್ನಾದ್ರೂ ಅಲರ್ಟ್ ಆಗಬೇಕಿದೆ.

ಇದನ್ನೂ ವೀಕ್ಷಿಸಿ:  'ಶುಗರ್ ಫ್ಯಾಕ್ಟರಿ' ಎರಡನೇ ಟ್ರೈಲರ್ ರಿಲೀಸ್..! 'ಕೃಷ್ಣಾ'ವತಾರಕ್ಕೆ ನಿಖಿಲ್ ಕುಮಾರಸ್ವಾಮಿ ಬೌಲ್ಡ್!