Asianet Suvarna News Asianet Suvarna News

ಬರ ಘೋಷಣೆಯಾದ್ರೂ ಸಿಕ್ಕಿಲ್ಲ ಪರಿಹಾರ: ಜಾನುವಾರುಗಳೊಂದಿಗೆ ಗುಳೆ ಹೊರಟ ಜನ

ಬರಗಾಲ ಎಂಬುದು ರಾಜ್ಯಾದ್ಯಂತ ತಾಂಡವವಾಡ್ತಿದೆ. ಅದ್ರಲ್ಲಂತೂ ಬರಪೀಡಿತ ಜಿಲ್ಲೆ ಎಂಬ ಕುಖ್ಯಾತಿ ಪಡೆದಿರೋ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಬರಕ್ಕೆ ತತ್ತರಿಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವುದಕ್ಕೆ ಶುರು ಮಾಡಿದ್ದಾರೆ.
 

ಮಳೆಯಿಲ್ಲ.. ಬೆಳೆಯಿಲ್ಲ.. ಜಾನುವಾರುಗಲಿಗೆ ಮೇವೂ ಸಿಕ್ತಿಲ್ಲ.. ಸರ್ಕಾರ ಬರ ಘೋಷಣೆಮಾಡಿದ್ರೂ ಪರಿಹಾರ ಕೊಟ್ಟಿಲ್ಲ.. ಏನ್ ಮಾಡೋದು ಎಂದು ಯೋಚಿಸಿದ ಜನ ಈಗ ಊರನ್ನೇ ತೊರೆಯುತ್ತಿದ್ದಾರೆ.. ಜಾನುವಾರುಗಳ ಸಮೇತ ಜನ ಗುಳೆ ಹೊರಟಿದ್ದಾರೆ. ಇದು ಚಿತ್ರದುರ್ಗದಲ್ಲಿ ಕಂಡು ಬಂದ ದೃಶ್ಯ.. ಜಾನುವಾರುಗಳಿಗೆ ಮೇವಿಲ್ಲ.. ನೀರು ಸಿಗುತ್ತಿಲ್ಲ.. ಹೀಗಾಗಿ ಕುರಿ, ಮೇಕೆಗಳ ಜತೆ ಜನ ಊರು ತೊರೆಯುತ್ತಿದ್ದಾರೆ. ಮೊಳಕಾಲ್ಮೂರು, ಚಳ್ಳಕೆರೆ ತಾಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ಊರಿಗೆ ಊರೇ ಖಾಲಿಯಾಗುತ್ತಿದೆ, ಈಗಾಗಲೇ ಸರ್ಕಾರ ಚಿತ್ರದುರ್ಗ(Chitradurga) ಜಿಲ್ಲೆಯನ್ನ ಬರಪೀಡಿತ ಎಂದು  ಘೋಷಿಸಿದೆ.. ಆದ್ರೆ, ಬರಪಟ್ಟಿಗೆ ಜಿಲ್ಲೆ ಘೋಷಣೆ ಮಾಡಿದ ಸರ್ಕಾರ(Government) ಇದುವರೆಗೂ ಪರಿಹಾರ ನೀಡಿಲ್ಲ.. ಹೀಗಾಗಿ ಊರು ಬಿಡೋದು ಬಿಟ್ರೆ ಬೇರೆ ಮಾರ್ಗವೇ ಇಲ್ಲ ಎನ್ನುತ್ತಿದ್ದಾರೆ ಇನ್ನೂ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ರನ್ನ ಕೇಳಿದ್ರೆ, ಜಿಲ್ಲೆಯಲ್ಲಿ ಗುಳೆ ಹೋಗ್ತಿರೋ ರೈತರ ಬಗ್ಗೆ ಮಾಹಿತಿ ಪಡೆದಿದ್ದೇನೆ. ಇಂದು ಈ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ ಬರಗಾಲ ರೈತರನ್ನು ಹಿಂಡಿ ಹಿಪ್ಪೆ ಮಾಡಿದೆ.. ತಿನ್ನೋಕೆ ಅನ್ನ ಹೋಗ್ಲಿ ರೈತರಿಗೆ ಆಧಾರವಾಗಿದ್ದ ಜಾನುವಾರುಗಳಿಗೆ ಮೇವು ಕೂಡ ಸಿಕ್ತಿಲ್ಲ. ಬರ ಘೋಷಣೆ ಮಾಡಿದ ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಿ ರೈತರನ್ನು ಕಾಪಾಡಬೇಕಿದೆ.

ಇದನ್ನೂ ವೀಕ್ಷಿಸಿ:  ಸುವರ್ಣ ಸಾಧಕರು 2023: ಸಾಧನೆಗೈದ ಹಲವರಿಗೆ ಪ್ರಶಸ್ತಿ ಪ್ರದಾನ

Video Top Stories