ಮಹಿಳೆ ಜೊತೆ ಅಸಭ್ಯ ವರ್ತನೆ, ತಹಶೀಲ್ದಾರ್ ಮೇಲೆ ಹಲ್ಲೆ, ರಕ್ಷಣೆಗೆ ಮನವಿ
ಆಕೆ ಎರಡು ತಿಂಗಳ ಹಿಂದೆ ಗಂಡನನ್ನು ಕಳೆದುಕೊಂಡ ಹೆಣ್ಣು ಮಗಳು, ವಿಧವಾ ವೇತನ ಮಾಡಿಕೊಳ್ಳಬೇಕು ಅಂತ ತಹಶೀಲ್ದಾರ್ ಕಚೇರಿಗೆ ಬಂದರೆ ಕಿರಾತಕ ತಹಶೀಲ್ದಾರ್ ಆಕೆ ಒಳಗೆ ಬರುತ್ತಿದ್ದಂತೆ ಅಸಭ್ಯವಾಗಿ ವರ್ತಿಸಿದ್ದಾನೆ.
ಬೆಳಗಾವಿ (ಜು. 17): ಆಕೆ ಎರಡು ತಿಂಗಳ ಹಿಂದೆ ಗಂಡನನ್ನು ಕಳೆದುಕೊಂಡ ಹೆಣ್ಣು ಮಗಳು, ವಿಧವಾ ವೇತನ ಮಾಡಿಕೊಳ್ಳಬೇಕು ಅಂತ ತಹಶೀಲ್ದಾರ್ ಕಚೇರಿಗೆ ಬಂದರೆ ಕಿರಾತಕ ತಹಶೀಲ್ದಾರ್ ಆಕೆ ಒಳಗೆ ಬರುತ್ತಿದ್ದಂತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ದರ್ಶನ್ ಪ್ರಕರಣದಲ್ಲಿ ಆಡಿಯೋ- ವಿಡಿಯೋ ಸ್ಫೋಟ!
ನೊಂದ ಮಹಿಳೆಯ ಮಗ ಕಳೆದ 8 ದಿನಗಳಿಂದ ವಿಧವಾ ಪಿಂಚಣಿ ಮಾಡಿಸೋಕೆ ಬರುತ್ತಿದ್ದರು. 'ಪದೇ ಪದೇ ನೀನೆ ಏಕೆ ಬರ್ತಿಯಾ ನಿನ್ ಅಮ್ಮನ್ನ ಕರ್ಕೊಂಡ ಬಾ ಅಂತ ತಹಶೀಲ್ದಾರ್ ಹೇಳಿದ್ದಾರೆ. ಅದರಂತೆ ಅಮ್ಮನನ್ನು ಕರೆದುಕೊಂಡು ಬಂದರೆ, ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಮಹಿಳೆಯ ಕಡೆಯರು ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಂದಾಯ ಇಲಾಖೆಯ ನೌಕರರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡುವಂತೆ ಹಾಗೂ ಹಲ್ಲೆ ಮಾಡಿದವರ ಮೇಲೆ ಕ್ರಮಕ್ಕೆ ಚಿಕ್ಕೋಡಿ ಎಸಿ ಯುಕೇಶ್ ಕುಮಾರ್ ಅವರಿಗ ನೌಕರರು ಮನವಿ ಸಲ್ಲಿಸಿದ್ದಾರೆ.