ಚಿಕ್ಕಮಗಳೂರಿನಲ್ಲಿ ಇಡೀ ಗ್ರಾಮವೇ ವೈರಲ್ ಜ್ವರದಿಂದ ತತ್ತರ: 2 ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿರುವ ಜನ

ಚಿಕ್ಕಮಗಳೂರು ಜಿಲ್ಲೆಯ ದೇವಗೊಂಡನಹಳ್ಳಿಯ ಜನರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಈ ಗ್ರಾಮದಲ್ಲಿ 400 ಕುಟುಂಬಗಳು ಇವೆ.
 

First Published Jul 12, 2024, 12:10 PM IST | Last Updated Jul 12, 2024, 12:11 PM IST

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ವೈರಲ್ ಜ್ವರದಿಂದ(VIral Fever) ಬಳಲುತ್ತಿದ್ದು, 400 ಕುಟುಂಬಗಳು ಇಲ್ಲಿ ಇವೆ. ಡೆಂಗ್ಯೂ ಜ್ವರದಿಂದ ತತ್ತರಿಸಿರುವ ಚಿಕ್ಕಮಗಳೂರಿನಲ್ಲಿ(Chikkamagaluru) ಇದೀಗ ವೈರಲ್ ಜ್ವರ ಬಂದಿದೆ. ಡೆಂಗ್ಯೂ ಪ್ರಕರಣದಲ್ಲಿ(Dengue fever) ಎರಡನೇ ಸ್ಥಾನ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಗ್ರಾಮಾಂತರ ಪ್ರದೇಶದ ಜನರಿಗೆ ಇದೀಗ ಸಂಕಷ್ಟ ಎದುರಾಗಿದೆ. ಪ್ರತಿಮನೆಯಲ್ಲೂ ಒಬ್ಬರು, ಇಬ್ಬರು ಜ್ವರಕ್ಕೆ ತುತ್ತಾಗಿದ್ದಾರೆ. ದೇವಗೊಂಡನಹಳ್ಳಿಯ ಜನರು ಜ್ವರದಿಂದ ತತ್ತರಿ ಹೋಗಿದ್ದಾರೆ. ಆರೋಗ್ಯ ತಪಾಸಣೆಗೆ 5 ರಿಂದ 7 ಕಿ.ಮೀ ನಿತ್ಯ ಸಂಚರಿಸುವ ಪರಿಸ್ಥಿತಿ ಇದ್ದು, ಗ್ರಾಮದಲ್ಲೇ ಮೆಡಿಕಲ್ ಕ್ಯಾಂಪ್ ಹಾಕುವಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸಿದೆ ಎನ್ನಬಹುದು. ಕಳೆದ ಎರಡು ತಿಂಗಳಿನಿಂದ  ಅನ್ಯಾರೋಗ್ಯಕ್ಕೆ ಒಳಾಗಿರುವ ಜನರು. 400ಕ್ಕೂ ಅಧಿಕ ಕುಟುಂಬ, 1500 ಜನ, 800ಕ್ಕೂ ಅಧಿಕ ಜನರಿಗೆ ಒಂದೇ ಸಮನಾದ ಕಾಯಿಲೆ ಕಾಣಿಸಿಕೊಂಡಿದೆ. 2 ತಿಂಗಳಿಂದ ಊರಲ್ಲಿರೋರೆಲ್ಲಾ ಒಂದೇ ಕಾಯಿಲೆಯಿಂದ ನರಳುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ವಿಧಾನಸಭೆ ಮಾದರಿ ಕೆಲಸ ಮಾಡಿಲ್ಲ-ಬಿ.ಕೆ. ಹರಿಪ್ರಸಾದ್‌..ಸೋಲಿಗೆ ಸತ್ಯ ಶೋಧನಾ ಸಮಿತಿಯಿಂದ ಆತ್ಮಾವಲೋಕನ..!