ವಿಧಾನಸಭೆ ಮಾದರಿ ಕೆಲಸ ಮಾಡಿಲ್ಲ-ಬಿ.ಕೆ. ಹರಿಪ್ರಸಾದ್‌..ಸೋಲಿಗೆ ಸತ್ಯ ಶೋಧನಾ ಸಮಿತಿಯಿಂದ ಆತ್ಮಾವಲೋಕನ..!

ವಿಜಯಪುರದಲ್ಲಿ ಹೊಂದಾಣಿಕೆ ಪಾಲಿಟಿಕ್ಸ್ ಎಂದ ಮಾಜಿ ಶಾಸಕ
ಸಮಿತಿ ಮುಂದೆ ಹಾಜರಾದ ಬಳಿಕ ಮನೋಹರ್ ಐನಾಪುರ ಹೇಳಿಕೆ
ಬಿಜೆಪಿ ಜೊತೆ ಕಾಂಗ್ರೆಸ್ ಶಾಸಕರ ಹೊಂದಾಣಿಕೆ ಎಂದ ಮಾಜಿ ಶಾಸಕ

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ಗೆ(Congress) ತೀವ್ರ ಮುಖಭಂಗವಾಗಿದ್ದು, ಟಾರ್ಗೆಟ್ 20 ತಲುಪುವಲ್ಲಿ ರಾಜ್ಯ ಕಾಂಗ್ರೆಸ್ ವಿಫಲವಾಗಿದೆ. ಹಾಗಾಗಿ ಸೋಲಿಗೆ ಕಾರಣ ಸಂಗ್ರಹಿಸಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದೆ. ಸೋಲಿಗೆ ಸತ್ಯ ಶೋಧನಾ ಸಮಿತಿಯಿಂದ(Fact finding committee) ಆತ್ಮಾವಲೋಕನ ಮಾಡಲು ಮುಂದಾಗಿದ್ದು, ಮಧುಸೂದನ್ ಮಿಸ್ತ್ರಿ, ಗೌರವ್ ಗೊಗೋಯ್, ಹಿಬಿ ಹಿಡನ್ ನೇತೃತ್ವದಲ್ಲಿ ಹೈಕಮಾಂಡ್ ನಾಯಕರ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ. ರಾಜ್ಯ ನಾಯಕರಿಂದ ವರದಿ ಸಂಗ್ರಹಿಸ್ತಿರೋ ಹೈಕಮಾಂಡ್ ಸಮಿತಿ, ಕಳಪೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ಆರಂಭಿಸಿದೆ. ಒಬ್ಬೊಬ್ಬರಾಗೇ ಸಮಿತಿ ಮುಂದೆ ಹಾಜರಾಗುತ್ತಿರುವ ನಾಯಕರು. ಕಳಪೆ ರಿಸಲ್ಟ್ ಬಗ್ಗೆ ಪ್ರತ್ಯೇಕ ವರದಿ ನೀಡಿದ ಬಿ.ಕೆ ಹರಿಪ್ರಸಾದ್(B.K. Hariprasad). ಸತ್ಯ ಶೋಧನಾ ಸಮಿತಿ ಮುಂದೆ ಹಿರಿಯರ ಕಡೆಗಣನೆ ಪ್ರಸ್ತಾಪಿಸಲಾಗಿದೆ. ವರದಿಯಲ್ಲಿ ಸಿಎಂ, ಡಿಸಿಎಂ ನಾಯಕತ್ವದ ಬಗ್ಗೆಯೇ ಉಲ್ಲೇಖ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: ನಿರೂಪಕಿ ಅಪರ್ಣಾ ನಿಧನಕ್ಕೆ ಸಿಎಂ, ಡಿಸಿಎಂ ಸಂತಾಪ: ಇವರ ನಿಧನ ಕಲಾ ಲೋಕಕ್ಕೆ ತುಂಬಲಾರದ ನಷ್ಟ-ಡಿಸಿಎಂ

Related Video