ಟೊಮ್ಯಾಟೋಗೆ ಫುಲ್ ಡಿಮ್ಯಾಂಡಪ್ಪೋ.. ಡಿಮ್ಯಾಂಡ್..! : ಬಂಡಾವಳ ಹಾಕಿದ್ದು 3 ಲಕ್ಷ ..ಲಾಭಗಳಿಸಿದ್ದು 30 ಲಕ್ಷ..!

ಟೊಮ್ಯಾಟೋಗೆ ಒಳ್ಳೆ ಬೆಲೆ ಇದೆ. ಅದೃಷ್ ಇದ್ದವರು ಬಂಪರ್ ಲಾಭ ಪಡೀತಿದ್ದಾರೆ. ಆದ್ರೆ, ಕೆಲವರ ದುರಾದೃಷ್ಟಕ್ಕೆ ಮಳೆ ಬಂದು ಬಂಗಾರದ ಬೆಳೆ ಕೊಚ್ಚಿಕೊಂಡು ಹೋಗ್ತಿದೆ.

First Published Aug 2, 2023, 10:47 AM IST | Last Updated Aug 2, 2023, 10:47 AM IST

ಮಾರ್ಕೆಟ್‌ನಲ್ಲಿ ಟೊಮ್ಯಾಟೋಗೆ (tomato) ಬಂಗಾರದ ಬೆಲೆ ಬಂದಿದೆ. ಟೊಮ್ಯಾಟೋ ಬೆಳೆದ ರೈತರು (Farmer) ಕೊಟ್ಯಾಧೀಶರಾಗುತ್ತಿದ್ದಾರೆ. ‌ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಟೊಮ್ಯಾಟೋ ಬೆಳೆದ ರೈತರಿಗೆ ಶುಕ್ರದಸೆ ಆರಂಭವಾಗಿದೆ. ಚಿಕ್ಕಮಗಳೂರಿನ(Chikkamagalur) ರೈತ ಕುಮಾರ್ 3 ಲಕ್ಷ ಬಂಡಾವಳ ಹಾಕಿ ಬರೋಬ್ಬರಿ 30 ಲಕ್ಷಗಳಿಸಿದ್ದಾನೆ. ಸದ್ಯ ಮಾರ್ಕೆಟ್‌ನಲ್ಲಿ ಟೊಮ್ಯಾಟೋ ಕೆಜಿಗೆ 160 ರಿಂದ 180 ರೂಪಾಯಿ  ರೇಟ್ ನಡಿಯುತ್ತಿದೆ. ಈಗ ಚಿಕ್ಕಮಗಳೂರಿನ ಟೊಮ್ಯಾಟೊ ಹೊರ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ದೆಹಲಿ, ರಾಜಸ್ಥಾನ, ಗುಜರಾತ್ , ಪಶ್ಚಿಮ ಬಂಗಾಳದಲ್ಲಿ ಫುಲ್ ಡಿಮ್ಯಾಂಡ್ ಬರುತ್ತಿದೆ. ಕಳೆದ 20 ವರ್ಷಗಳಿಂದ ಟೊಮ್ಯಾಟೋ ಬೆಳೆದು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದ ರೈತರಿಗೆ ಈಗ ಬಂಪರ್ ಬೆಲೆ ಸಿಕ್ಕಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ 25 ಕೆಜೆ ಬಾಕ್ಸ್ ಟೊಮ್ಯಾಟೋ 2500 ರಿಂದ 4600 ಬಿಕರಿಯಾಗಿದೆ. ಒಂದೆಡೆ ಟೊಮ್ಯಾಟೊಗೆ ಭರ್ಜರಿ ರೇಟು ಸಿಕ್ಕ ಖೂಷಿಯಲ್ಲಿದ್ದರೆ. ಮತ್ತೆ ಕೆಲವೆಡೆ ರೈತರು ಮಳೆಯಿಂದ ಬೆಳೆ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಹಾವೇರಿ (Haveri)ತಾಲೂಕಿನ ದೇವಗಿರಿ ಗ್ರಾಮದ ದುರಗಪ್ಪ 2 ಲಕ್ಷ ಖರ್ಚು ಮಾಡಿ , ನಾಲ್ಕು ಎಕರೆ ಜಮಿನಿನಲ್ಲಿ ಟೊಮ್ಯಾಟೋ ಬೆಳೆದಿದ್ದ. ಇನ್ನೇನು ಟೊಮ್ಯಾಟೋ  ಕೀಳಬೇಕು ಎನ್ನುವಷ್ಟರಲ್ಲಿ ಮಳೆ ಅಬ್ಬರಿಸಿದ್ದು, ಸಂಪೂರ್ಣ ಬೆಳೆ ಹಾನಿಯಾಗಿದೆ.

ಇದನ್ನೂ ವೀಕ್ಷಿಸಿ:  ಮತ್ತೊಂದು ಬಾಂಬ್ ಸಿಡಿಸಿದ ಕಂಗನಾ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ಪೋಸ್ಟ್ ವೈರಲ್..!