ಪಾಕ್‌ನ ಭಯೋತ್ಪಾದಕರಿಗೆ ಭಾರತಕ್ಕೆ ಬಂದು ಏನು ಮಾಡೋಕಾಗಲ್ಲ, ಅದಕ್ಕೆ ಇಲ್ಲಿಯೇ ಸೃಷ್ಟಿ ಮಾಡಿದ್ದಾರೆ: ಸೂಲಿಬೆಲೆ

ಬಿ.ಕೆ‌.ಹರಿಪ್ರಸಾದ್ ಅವ್ರು ಪಾಕಿಸ್ತಾನ ಬಿಜೆಪಿಗೆ ಶತ್ರು ಇರಬಹುದು, ಕಾಂಗ್ರೆಸ್‌ಗೆ ಅಲ್ಲ ಅಂತ ಹೇಳಿದ್ದಾರೆಂದು ಹೇಳುವ ಮೂಲಕ ಚಕ್ರವರ್ತಿ ಸೂಲಿಬೆಲೆ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

First Published Mar 2, 2024, 11:50 AM IST | Last Updated Mar 2, 2024, 11:51 AM IST

ಯಾದಗಿರಿ: ಬೆಂಗಳೂರಿನಲ್ಲಿ ಬಹಳ ವರ್ಷಗಳ ಬಳಿಕ ಸ್ಫೋಟ ಆಗಿದ್ದು ಕೇಳಿದ್ದೇವೆ. ಮೋದಿ ಪ್ರಧಾನಿ(Narendra Modi) ಆದ ನಂತರ ದೇಶದಲ್ಲಿ ಬಾಂಬ್ ಬ್ಲಾಸ್ಟ್ ಘಟನೆಗಳು ನಡೆದಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarti Sulibele) ಹೇಳಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆ ನಮೋ ಬ್ರಿಗೇಡ್‌ನ 'ನಮೋ ಭಾರತ' ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿದ್ದಾರೆ. ಮೋದಿ‌ ಪಾಕಿಸ್ತಾನದ ಭಯೋತ್ಪಾದಕರನ್ನು ಭಾರತದ(India) ಗಡಿಯೊಳಗೆ ಬಿಡ್ತಿಲ್ಲ. ಭಾರತದ ಮೋಸ್ಟ್ ವಾಂಟೆಡ್ ಉಗ್ರರನ್ನು ಅಲ್ಲಿಯೇ ಮುಗಿಸಿ ಬಿಡ್ತಾರೆ. ಭಾರತ ಅನಾಮಿಕ ಗನ್ ಮ್ಯಾನ್ ಪಾಕಿಸ್ತಾನದಲ್ಲೇ(Pakistan) ಮುಗಿಸಿ ಬಿಡ್ತಾರೆ. ಪಾಕಿಸ್ತಾನದ ಭಯೋತ್ಪಾದಕರು ಭಾರತಕ್ಕೆ ಬಂದು ಮಾಡೋದಕ್ಕೆ ಏನಿಲ್ಲ. ಅದಕ್ಕೆ ಅವ್ರು ಇಲ್ಲಿಯೇ ಕೆಲವು ಭಯೋತ್ಪಾದರನ್ನು ಸೃಷ್ಟಿ ಮಾಡ್ಬಿಟ್ಟಿದ್ದಾರೆ. ಅವರಿಗೆ ಸಪೋರ್ಟ್ ಮಾಡಲು ಕರ್ನಾಟಕ ಸರ್ಕಾರವಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ. ಸಂವಿಧಾನ ರಕ್ಷಣೆ ಮಾಡುವ ಕೇಂದ್ರದಲ್ಲಿ ಘೋಷಣೆ ಕೂಗಿದ್ದಾರೆ. ಬಿ.ಕೆ‌.ಹರಿಪ್ರಸಾದ್ ಅವ್ರು ಪಾಕಿಸ್ತಾನ ಬಿಜೆಪಿಗೆ ಶತ್ರು ಇರಬಹುದು, ಕಾಂಗ್ರೆಸ್‌ಗೆ(Congress) ಅಲ್ಲ ಅಂತ ಹೇಳಿದ್ದಾರೆ. ಅವ್ರು ಯಾವ ಲೇವಲ್ ಅಂತ ತೋರಿಸಿಬಿಟ್ರು. ಕಾಂಗ್ರೆಸ್‌ ಏನು ಮಾಡಲು ಹೊರಟಿದೆ ಅಂತ ಗೊತ್ತಾಗುತ್ತದೆ ಎಂದು ಶಹಾಪುರದಲ್ಲಿ ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  RSS ಸಂಸ್ಥಾಪಕ ಡಾ.ಹೆಡಗೇವಾರ್: ಜೀವನ ಚರಿತ್ರೆ ಆಧಾರಿತ ಮ್ಯಾನ್ ಆಫ್ ದಿ ಮಿಲೇನಿಯಾ ಪುಸ್ತಕ ಬಿಡುಗಡೆ

Video Top Stories