RSS ಸಂಸ್ಥಾಪಕ ಡಾ.ಹೆಡಗೇವಾರ್: ಜೀವನ ಚರಿತ್ರೆ ಆಧಾರಿತ ಮ್ಯಾನ್ ಆಫ್ ದಿ ಮಿಲೇನಿಯಾ ಪುಸ್ತಕ ಬಿಡುಗಡೆ
ಡಾ.ಹೆಡಗೇವಾರ್ ಜೀವನ ಚರಿತ್ರೆ ಪುಸ್ತಕ ಬಿಡುಗಡೆ
RSS ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡಗೇವಾರ್
ಮ್ಯಾನ್ ಆಫ್ ದಿ ಮಿಲೇನಿಯಾ ಪುಸ್ತಕ ಲೋಕಾರ್ಪಣೆ
ದೆಹಲಿಯಲ್ಲಿ RSS ಸಂಸ್ಥಾಪಕ ಡಾ.ಹೆಡಗೇವಾರ್ ಜೀವನ ಚರಿತ್ರೆ ಆಧಾರಿತ ಮ್ಯಾನ್ ಆಫ್ ದಿ ಮಿಲೇನಿಯಾ ಪುಸ್ತಕ(Man of the Millennium book) ಬಿಡುಗಡೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ವ್ಯಕ್ತಿ ನಿರ್ಮಾಣ, ಸಮಾಜ ನಿರ್ಮಾಣ, ರಾಷ್ಟ್ರ ನಿರ್ಮಾಣ ಹಾಗು ಚರಿತ್ರೆಯ ನಿರ್ಮಾಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಂದಿನ ಸಾಲಿನಲ್ಲಿರುತ್ತೆ ಎಂದು ಏಷ್ಯಾನೆಟ್ ನೆಟ್ವರ್ಕ್ ಚೇರ್ಮನ್ ರಾಜೇಶ್ ಕಾಲ್ರಾ ಅಭಿಪ್ರಾಯಪಟ್ರು. ನವದೆಹಲಿಯ(Dlehi) ಸಿಎಂ ಬಾಲಯೋಗಿ ಆಡಿಟೋರಿಯಂನಲ್ಲಿ RSS ಸಂಸ್ಥಾಪಕ ಡಾ.ಹೆಡಗೇವಾರ್(DR. Keshav Baliram hedgewar) ಮ್ಯಾನ್ ಆಫ್ ದಿ ಮಿಲೇನಿಯಾ ಡಾ.ಹೆಡಗೇವಾರ್ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಿತು.ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಸೀರ್ ಡಾ.ಹೆಡಗೇವಾರ್ ಅವರ ಜೀವನಚರಿತ್ರೆಯನ್ನು ಬಿಡುಗಡೆ ಮಾಡಿದ್ರು. ಇದೇ ವೇಳೆ ಮಾತನಾಡಿದ ಏಷ್ಯಾನೆಟ್ ನೆಟ್ವರ್ಕ್ ಚೇರ್ಮನ್ ರಾಜೇಶ್ ಕಾಲ್ರಾ RSS ಸದಾ ರಾಷ್ಟ್ರದ ಮುಖ್ಯ ಅನ್ನುತ್ತೆ. ವ್ಯಕ್ತಿ, ಚರಿತ್ರೆ ಹಾಗೂ ಸಮಾಜ ನಿರ್ಮಾಣದಲ್ಲಿ ಸದಾ ಮುಂದಿರುತ್ತೆ ಅಂದ್ರು. ಇನ್ನು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ RSS ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿದ್ರು. ಡಾ. ಹೆಡಗೇವಾರ್ ಅವರ ದೇಶಭಕ್ತಿ ಎಂಥದ್ದು ಎಂದ್ರೆ ಈ ರಾಷ್ಟ್ರದಲ್ಲಿ ನಾವು ಹುಟ್ಟಿದ್ದೇವೆ ಇದು ನಮ್ಮ ಕರ್ತವ್ಯ ಎನ್ನುತ್ತಿದ್ದರು. ಅವರೊಬ್ಬ ರಾಜಿಯಾಗದ, ಕ್ರಿಯಾಶೀಲ ದೇಶಭಕ್ತ. ಇನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಎರಡು ಬಾರಿ ಜೈಲಿಗೆ ಹೋಗಿದ್ರು ಅಂದ್ರು. ರಾಜ್ಯಪಾಲ ನ್ಯಾ.ಅಬ್ದುಲ್ ನಸೀರ್ ಸಹ ಮಾತನಾಡಿ, ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತುಂಬಾ ಖುಷಿಯಾಗುತ್ತಿದೆ. ಡಾ.ಹೆಡಗೇವಾರ್ ಒಬ್ಬ ಮಹಾನ್ ರಾಷ್ಟ್ರಭಕ್ತ. ತಾಯಿನಾಡಿಗಾಗಿ ಅವರು ಬಾಲ್ಯದಿಂದಲೇ ಧ್ವನಿ ಎತ್ತಿದ್ದವರು ಎಂದು ಹಾಡಿ ಹೊಗಳಿದ್ರು.
ಇದನ್ನೂ ವೀಕ್ಷಿಸಿ: ಬಸವನಗುಡಿ ಸಂಭ್ರಮ: ಫುಡ್, ಫನ್ ಆ್ಯಂಡ್ ಫ್ಯಾಷನ್ ಫೆಸ್ಟಿವಲ್‌ಗೆ ಭರ್ಜರಿ ರೆಸ್ಪಾನ್ಸ್