ಬಿಜೆಪಿ ಸರ್ಕಾರ ರಚನೆಯ ಕೀರ್ತಿ ಎಚ್‌ಡಿಕೆಗೆ ಕೊಟ್ಟ ವಿಜಯೇಂದ್ರ!

ದೊಡ್ಡಬಳ್ಳಾಪುರ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದ ವಿಜಯೆಂದ್ರ ಮಿಣಿ ಮಿಣಿ ಕುಮಾರಸ್ವಾಮಿ ಎಂದು ಹೆಚ್‌ಡಿಕೆ ಕಾಲೆಳೆದಿದ್ದಾರೆ.

Share this Video
  • FB
  • Linkdin
  • Whatsapp

ದೊಡ್ಡಬಳ್ಳಾಪುರ(ಜ.30): ದೊಡ್ಡಬಳ್ಳಾಪುರ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದ ವಿಜಯೆಂದ್ರ ಮಿಣಿ ಮಿಣಿ ಕುಮಾರಸ್ವಾಮಿ ಎಂದು ಹೆಚ್‌ಡಿಕೆ ಕಾಲೆಳೆದಿದ್ದಾರೆ.

ಸಿಎಂ ಪುತ್ರ ವಿಜಯೇಂದ್ರ ದೊಡ್ಡಬಳ್ಳಾಪುರದಲ್ಲಿ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಬ್ಯಾಂಕ್ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಕೀರ್ತಿ ಎಚ್‌.ಡಿ. ಕುಮಾರಸ್ವಾಮಿಗೆ ಹೋಗಬೇಕು. ಅವರು ನಡೆಸಿದ ಆಡಳಿತದಿಂದ ಬೇಸತ್ತು ರಾಜಿನಾಮೆ ಕೊಟ್ಟು ಕೆಲ ಶಾಸಕರು ಬಿಜೆಪಿಗೆ ಬಂದು ಗೆದ್ದಿದ್ದಾರೆ ಎಂದಿದ್ದಾರೆ.

ಕರ್ನಾಟಕದ 27 ಮಾಜಿ ಸಚಿವರಿಗೆ ನೀಡಿದ್ದ ಗನ್‌ ಮ್ಯಾನ್ ಭದ್ರತೆ ವಾಪಸ್

ಅವರ ಸಹಕಾರದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರವಾಗಿದೆ. ಇನ್ನೂ ಸಚಿವ ಸಂಪುಟ ವಿಸ್ತರಣೆ ಮಾಡುವ ಮುಖಾಂತರ ಸರ್ಕಾರ ಉತ್ತಮ ಆಡಳಿತ ಕೊಡುತ್ತೆ ಅನ್ನೋ ವಿಶ್ವಾಸವಿದೆ. ಎಚ್‌.ಡಿ. ಕುಮಾರಸ್ವಾಮಿ ಇಂದು ಮಿಣಿ ಮಿಣಿ ಕುಮಾರಸ್ವಾಮಿಯಾಗಿ ಪ್ರಸಿದ್ಧಿಯಾಗಿದ್ದಾರೆ ಎಂದು ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.

Related Video