Asianet Suvarna News Asianet Suvarna News

ಕರ್ನಾಟಕದ 27 ಮಾಜಿ ಸಚಿವರಿಗೆ ನೀಡಿದ್ದ ಗನ್‌ ಮ್ಯಾನ್ ಭದ್ರತೆ ವಾಪಸ್

ಮೈತ್ರಿ ಸರ್ಕಾರದಲ್ಲಿದ್ದ 27 ಮಾಜಿ ಸಚಿವರಿಗೆ ನೀಡಲಾಗಿದ್ದ ಗನ್‌ಮ್ಯಾನ್ ಭದ್ರತೆ ಹಾಗೂ ನಿವಾಸದ ಗಾರ್ಡ್ ಭದ್ರತೆಯನ್ನು ವಾಪಸ್ ವಾಪಸ್ ಪಡೆಯಲಾಗಿದೆ. ಹಾಗಾದ್ರೆ ಯಾರಿಗೆಲ್ಲ ಭದ್ರತೆ ನೀಡಲಾಗಿತ್ತು ಎನ್ನುವ ಪಟ್ಟಿ ಈ ಕೆಳಗಿನಂತಿದೆ.

Karnataka Govt withdraws gunman security from 27 Ex ministers
Author
Bengaluru, First Published Jan 30, 2020, 3:01 PM IST

ಬೆಂಗಳೂರು, (ಜ.30): ರಾಜ್ಯದ 27 ಮಾಜಿ ಸಚಿವರಿಗೆ ನೀಡಲಾಗಿದ್ದ ಗನ್‌ಮ್ಯಾನ್ ಹಾಗೂ ನಿವಾಸದ ಗಾರ್ಡ್ ಭದ್ರತೆಯನ್ನು ವಾಪಸ್ ಪಡೆಯಲಾಗಿದ್ದು, ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಮೈತ್ರಿ ಸರ್ಕಾರದ ಅವಧಿಯಲ್ಲಿ  27 ಮಾಜಿ ಸಚಿವರಿಗೆ ಗನ್‌ಮ್ಯಾನ್ ಹಾಗೂ ನಿವಾಸದ ಗಾರ್ಡ್ ಭದ್ರತೆ ನೀಡಲಾಗಿತ್ತು. ಆದ್ರೆ, ಇದೀಗ ಅದನ್ನು ಎನ್ ಭಾಸ್ಕರ್ ರಾವ್ ಆದೇಶ ವಾಪಸ್ ಪಡೆದು ಆದೇಶ ನೀಡಿದ್ದಾರೆ.

ತೇಜಸ್ವಿ ಸೂರ್ಯಗೆ ಹೆಚ್ಚಿನ ಭದ್ರತೆ, ಆರೋಪಿಗಳ ಕೋಡ್ ವರ್ಡ್ ಅಬ್ಬಬ್ಬಾ!

ಮಾಜಿ ಸಚಿವರ ಪಟ್ಟಿ ಇಂತಿದೆ
ಆರ್.ವಿ ದೇಶಪಾಂಡೆ, ಬಂಡೆಪ್ಪ ಕಾಶಪೂರ್, ಜಿ.ಟಿ.ದೇವೇಗೌಡ, ಡಿ ಸಿ ತಮ್ಮಣ್ಣ, ಕೃಷ್ಣ ಭೈರೇಗೌಡ, ಎಂ.ಸಿ. ಮನಗೂಳಿ, ಎನ್‌.ಎಚ್. ಶಿವಶಂಕರ ರೆಡ್ಡಿ, ಶ್ರೀನಿವಾಸ, ರಮೇಶ್ ಜಾರಕಿಹೋಳಿ, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ , ಸಿ.ಎಸ್. ಪುಟ್ಟರಾಜು, ಯು.ಟಿ.ಖಾದರ್, ಸಾ.ರಾ.ಮಹೇಶ್, ಎನ್‌.ಮಹೇಶ್, ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ರಾಜಶೇಖರ ಪಾಟೀಲ್, ಸಿ.ಪುಟ್ಟರಂಗ ಶೆಟ್ಟಿ, ಆರ್. ಶಂಕರ್, ಜಯಮಾಲಾ, ಬಿ.ಆರ್. ತಿಮ್ಮಾಪೂರ್, ತುಕಾರಾಂ ಇ., ರಹೀಂ ಖಾನ್, ಸತೀಶ್ ಜಾರಕಿಹೊಳಿ, ಪಿ.ಟಿ.ಪರಮೇಶ್ವರ್ ನಾಯಕ್, ಜಮೀರ್ ಅಹ್ಮದ್ ಸೇರಿ 27 ಮಂದಿ ಅಂಗರಕ್ಷಕ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.

ಜನವರಿ 21 ರಂದೇ ಆಯುಕ್ತರು, ಎ ಮತ್ತು ಬಿ ಶ್ರೇಣಿ ಎಂದು ವಿಭಾಗ ಮಾಡಿ ಭದ್ರತೆಯನ್ನು ವಾಪಸ್ಸು ಪಡೆದಿದ್ದಾರೆ. ಅಲ್ಲದೇ, ಎ ಶ್ರೇಣಿಯಲ್ಲಿರುವ ಮಾಜಿ ಸಚಿವರಾದ ಡಾ.ಜಿ ಪರಮೇಶ್ವರ, ಎಚ್. ಡಿ. ರೇವಣ್ಣ, ಡಿಕೆ. ಶಿವಕುಮಾರರ್, ಕೆ.ಜೆ. ಜಾರ್ಜ್ ಹಾಗೂ ಎಂ.ಬಿ. ಪಾಟೀಲ್ ಈ 5 ಮಂದಿಗೆ ಝಡ್ ಪ್ಲಸ್ ಶ್ರೇಣಿ ಮತ್ತು ಪೈಲಟ್ ಮುಂದುವರಿಸಲಾಗಿದೆ. 

Follow Us:
Download App:
  • android
  • ios