ಎತ್ತುಗಳಿಗಾಗಿಯೇ ಜೋಡೆತ್ತಿನ ಗಾಡಿ ಸ್ಪರ್ಧೆ : ಮನೆಮಾಡಿತ್ತು ಹಬ್ಬದ ಸಂಭ್ರಮ

ಜನಸಾಮಾನ್ಯರಿಗೆ ಬೇಜಾರಾದ್ರೆ ಸಿನಿಮಾ, ಆಟ, ಟೂರು ಅದು-ಇದು ಅಂತೆಲ್ಲಾ ಸುತ್ತಾಡ್ತಾರೆ. ಆದ್ರೆ, ವರ್ಷಪೂರ್ತಿ ಹೊಲಗದ್ದೆಗಳಲ್ಲಿ ಗಾಣದೆತ್ತುಗಳಂತೆ ದುಡಿಯೋ ಮೂಕಪ್ರಾಣಿಗಳೇನು ಮಾಡಬೇಕು. ಅದಕ್ಕಾಗಿ, ಹೊಲ-ಗದ್ದೆಗಳಲ್ಲಿ ಉಳುಮೆ ಕಾರ್ಯಗಳೆಲ್ಲಾ ಮುಗಿದ ನಿಮಿತ್ತ ಚಿಕ್ಕಮಗಳೂರಿನಲ್ಲಿ ಎತ್ತುಗಳಿಗಾಗಿಯೇ ಜೋಡೆತ್ತಿನ ಗಾಡಿ ಸ್ಪರ್ಧೆ ಏರ್ಪಡಿಸಿದ್ರು. ರಾಜ್ಯದ ಮೂಲೆಮೂಲೆಗಳಿಂದ ಬಂದು ಯುದ್ಧಕ್ಕೆ ಸನ್ನದ್ಧರಾದ ಸೈನಿಕರಂತಿದ್ದ ಎತ್ತುಗಳು ನೋಡುಗರ ಮನಸೆಳೆದ್ವು. ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ 17ನೇ ವರ್ಷದ ಜೋಡೆತ್ತಿನ ಗಾಡಿ ಸ್ಪರ್ಧೆ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೆ ನಿರ್ಮಿಸಿತ್ತು.

First Published Feb 4, 2021, 4:07 PM IST | Last Updated Feb 4, 2021, 4:07 PM IST

ಚಿಕ್ಕಮಗಳೂರು (ಫೆ.04):  ಜನಸಾಮಾನ್ಯರಿಗೆ ಬೇಜಾರಾದ್ರೆ ಸಿನಿಮಾ, ಆಟ, ಟೂರು ಅದು-ಇದು ಅಂತೆಲ್ಲಾ ಸುತ್ತಾಡ್ತಾರೆ. ಆದ್ರೆ, ವರ್ಷಪೂರ್ತಿ ಹೊಲಗದ್ದೆಗಳಲ್ಲಿ ಗಾಣದೆತ್ತುಗಳಂತೆ ದುಡಿಯೋ ಮೂಕಪ್ರಾಣಿಗಳೇನು ಮಾಡಬೇಕು. ಅದಕ್ಕಾಗಿ, ಹೊಲ-ಗದ್ದೆಗಳಲ್ಲಿ ಉಳುಮೆ ಕಾರ್ಯಗಳೆಲ್ಲಾ ಮುಗಿದ ನಿಮಿತ್ತ ಚಿಕ್ಕಮಗಳೂರಿನಲ್ಲಿ ಎತ್ತುಗಳಿಗಾಗಿಯೇ ಜೋಡೆತ್ತಿನ ಗಾಡಿ ಸ್ಪರ್ಧೆ ಏರ್ಪಡಿಸಿದ್ರು.

ಎತ್ತುಗಳ ಮೇಲೆ 14 ಟನ್‌ ಕಬ್ಬು: ಪ್ರಕರಣ ದಾಖಲು ...

ರಾಜ್ಯದ ಮೂಲೆಮೂಲೆಗಳಿಂದ ಬಂದ  ಎತ್ತುಗಳು ನೋಡುಗರ ಮನಸೆಳೆದ್ವು. ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ 17ನೇ ವರ್ಷದ ಜೋಡೆತ್ತಿನ ಗಾಡಿ ಸ್ಪರ್ಧೆ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೆ ನಿರ್ಮಿಸಿತ್ತು.