ಭಗ್ನಪ್ರೇಮಿಯ ಕ್ರೈಂ ಡೈರಿ: ಬ್ರೇಕಪ್ ಮಾಡಿಸಿದವರ ಬಾಳು ಮುಗಿಸಲು ಗಿಫ್ಟ್ ಮಾಡಿದ್ದ ವಿಷದ ಲಡ್ಡು!
ಶಿವಮೊಗ್ಗದಲ್ಲಿ ಭಗ್ನ ಪ್ರೇಮಿಯೊಬ್ಬ ವಿಷದ ಲಡ್ಡುಗಳನ್ನು ಕೊರಿಯರ್ ಮೂಲಕ ಕಳುಹಿಸಿದ್ದಾನೆ. ವೈದ್ಯೆಯ ಮಗಳನ್ನು ಪ್ರೀತಿಸುತ್ತಿದ್ದ ಸೌಹಾರ್ದ್ ಎಂಬಾತ, ಪ್ರೇಮ ವಿಫಲವಾದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ. ಬಿಜೆಪಿ ಎಂಎಲ್‌ಸಿ ಧನಂಜಯ ಸರ್ಜಿ ಹೆಸರಿನಲ್ಲಿ ಲಡ್ಡು ಕಳುಹಿಸಲಾಗಿತ್ತು.
ಶಿವಮೊಗ್ಗ (ಜ.6): ಇದು ಭಗ್ನ ಪ್ರೇಮಿಯ ಅಪೂರ್ಣ ಡೈರಿಯಲ್ಲ. ಇದು ಭಗ್ನ ಪ್ರೇಮಿಯ ಕ್ರೈಂ ಡೈರಿ. ಶಿವಮೊಗ್ಗದ ಎನ್ ಇಎಸ್ ಶಿಕ್ಷಣ ಸಂಸ್ಥೆಯ ನಾಗರಾಜ್ ಮತ್ತು ಮನರೋಗ ತಜ್ಞೆ ಡಾ. ಪವಿತ್ರ ಮತ್ತು ಡಾ. ಅರವಿಂದ ಅವರಿಗೆ ಹೊಸ ವರ್ಷದ ಸಂಭ್ರಮಕ್ಕೆ ಬಂದಿದ್ದ ಸ್ವೀಟ್ ಬಾಕ್ಸ್ ಈಗ ರಾಜ್ಯಾದ್ಯತ ಸದ್ದು ಮಾಡಿದೆ.
ಅಸಲಿಗೆ ಕೊರಿಯರ್‌ನಲ್ಲಿ ಬಂದಿದ್ದು ಬರೀ ಲಡ್ಡು ಆಗಿರಲಿಲ್ಲ. ಅದು ವಿಷದ ಲಡ್ಡು ಆಗಿತ್ತು.ಅದರಲ್ಲೂ ಬಿಜೆಪಿ ಎಂಎಲ್‌ಸಿ ಧನಂಜಯ ಸರ್ಜಿ ಹೆಸರಲ್ಲಿ ಈ ಸ್ವೀಟ್ ಬಾಕ್ಸ್ ಬಂದಿತ್ತು. ಈಗ ಕೋಟೆ ಪೊಲೀಸರು ಪ್ರಕರಣದ ತನಿಖೆ ಮಾಡಿ ಈಗ ವಿಷ ಲಡ್ಡು ಪ್ರಕರಣವನ್ನು ಬಯಲು ಮಾಡಿದ್ದಾರೆ.
ಧನಂಜಯ್ ಸರ್ಜಿಯಿಂದ ಸರ್ಕಾರ ರಚನೆಯಾಗಲ್ಲ ಎಂದಿದ್ದ ರಘುಪತಿ ಭಟ್! ತಿರುಗೇಟು ನೀಡಿದ ಅಭ್ಯರ್ಥಿ
ಅಸಲಿಗೆ ಈ ವಿಷದ ಲಡ್ಡು ಕೊರಿಯರ್ ಮಾಡಿದ್ದು, ಸೌಹಾರ್ದ್ ಪಟೇಲ್ ಎನ್ನುವ ಭಗ್ನ ಪ್ರೇಮಿ. ವೈದ್ಯೆಯ ಮಗಳನ್ನು ಪ್ರೀತಿ ಮಾಡ್ತಿದ್ದ ಸೌಹಾರ್ದಗೆ ಪ್ರೇಮದಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಈ ಬ್ರೇಕಪ್‌ಗೆ ಕಾರಣವಾದ ನಾಗರಾಜ್, ಮನೋರೋಗ ತಜ್ಞೆ ಡಾ.ಪವಿತ್ರಾ ಹಾಗೂ ಡಾ. ಅರವಿಂದ್ ಅವರನ್ನು ಸಾಯಿಸಲು ಈ ಘನಂದಾರಿ ಕೆಲಸ ಮಾಡಿದ್ದ ಎನ್ನುವುದು ಬಯಲಾಗಿದೆ.