ಧನಂಜಯ್ ಸರ್ಜಿಯಿಂದ ಸರ್ಕಾರ ರಚನೆಯಾಗಲ್ಲ ಎಂದಿದ್ದ ರಘುಪತಿ ಭಟ್! ತಿರುಗೇಟು ನೀಡಿದ ಅಭ್ಯರ್ಥಿ
ಧನಂಜಯ್ ಸರ್ಜಿಯಿಂದ ಸರ್ಕಾರ ರಚನೆಯಾಗಲ್ಲ, ಹೀಗಾಗಿ ಅವರ ಸೋಲಿನಿಂದ ಬಿಜೆಪಿಗೆ ನಷ್ಟವಿಲ್ಲ ಎಂದಿದ್ದ ರಘುಪತಿ ಭಟ್ ಹೇಳಿಕೆಗೆ ಧನಂಜಯ ಸರ್ಜಿ ತಿರುಗೇಟು ನೀಡಿದ್ದಾರೆ. ಭಾರತೀತ ಜನತಾ ಪಾರ್ಟಿ ನಿಂತಿರೋದು ಕಾರ್ಯಕರ್ತರ ಬಲದಿಂದ ಎಂದು ಹರಿಹಾಯ್ದಿದ್ದಾರೆ.
ವಿಧಾನ ಪರಿಷತ್ ಚುನಾವಣೆ (Legislative Council Elections) ಹಿನ್ನೆಲೆ ದಿನಕ್ಕೊಂದು ಬೆಳವಣಿಗೆ ಬಿಜೆಪಿಯಲ್ಲಿ ಆಗುತ್ತಿದೆ. ಈ ನಡುವೆ ಧನಂಜಯ್ ಸರ್ಜಿಯಿಂದ (Dhananjaya Sarji) ಸರ್ಕಾರ ರಚನೆಯಾಗಲ್ಲ, ಹೀಗಾಗಿ ಅವರ ಸೋಲಿನಿಂದ ಬಿಜೆಪಿಗೆ ನಷ್ಟವಿಲ್ಲ ಎಂದಿದ್ದ ರಘುಪತಿ ಭಟ್ (Raghupati Bhat) ಹೇಳಿಕೆಗೆ ಧನಂಜಯ ಸರ್ಜಿ ತಿರುಗೇಟು ನೀಡಿದ್ದಾರೆ. ಭಾರತೀತ ಜನತಾ ಪಾರ್ಟಿ ನಿಂತಿರೋದು ಕಾರ್ಯಕರ್ತರ ಬಲದಿಂದ, ರಘುಪತಿ ಭಟ್ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರು ಕೂಡ ಮೂರು ಬಾರಿ ಶಾಸಕರಾಗಿದ್ದವರು, ಅವರ ಬಗ್ಗೆ ನಮಗೆ ಬಹಳ ಗೌರವವಿದೆ. ಆದರೆ ಭಾರತೀಯ ಜನತಾ ಪಾರ್ಟಿಗೆ ಇರೋದು ಒಬ್ಬರೆ ಅಭ್ಯರ್ಥಿ, ಸೂಕ್ತ ಅಭ್ಯರ್ಥಿಯನ್ನ ಸಂಘಟನೆಯ ಹಿರಿಯರು ಸೂಚಿಸಿದ್ದಾರೆ, ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲಿ ದುಡಿದ ಒಳ್ಳೆಯ ಅಭ್ಯರ್ಥಿಯನ್ನ ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಹಾಗೆಯೇ ಧನಂಜಯ ಸರ್ಜಿ ಬಿಜೆಪಿ(BJP) ಪಕ್ಷಕ್ಕೆ ಹೊಸಬನಲ್ಲ, 10 ನೇ ವಯಸ್ಸಿನಿಂದಲೇ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ, ಈಗಲು ಸ್ವಯಂ ಸೇವಕ, ನನ್ನ ಜೀವ ಇರುವ ತನಕ ನಾನು ಸ್ವಯಂ ಸೇವಕ, ರಘುಪತಿ ಭಟ್‌ಗೆ ಮೂರು ಬಾರಿ ಎಂ.ಎಲ್.ಎ ಸೀಟ್ ಕೊಟ್ಟಿರೋದು ಬಿಜೆಪಿ, ಅದು ಅವರಿಗೆ ಗೊತ್ತಿರಲಿ. ಪಕ್ಷದ ಹಿರಿಯರ ತೀರ್ಮಾನ ಅಂತಿಮ, ಅದರಂತೆ ಚುನಾಚಣಾ ಕೆಲಸ ಆಗುತ್ತೆ, ಸರ್ಜಿ ಬಗ್ಗೆ ಮಾತನಾಡಲು ರಘುಪತಿ ಭಟ್ ಗೆ ಬೇರೆ ಏನು ವಿಚಾರ ಇಲ್ಲ ಎಂದು ಹರಿಹಾಯ್ದಿದ್ದಾರೆ.
ಉಡುಪಿಯ ಮನೆಗೆ ಹೋದಾಗಲು ಸಹ ಸೌಜನ್ಯಕ್ಕೂ ಮನೆಯ ಒಳಗೆ ಕರೆದಿಲ್ಲ, ರಘುಪತಿ ಭಟ್ ಹೇಳ್ತಾರೆ ನಾನು ಕಾಂಗ್ರೆಸ್‌ನಿಂದ ಬಂದಿದ್ದೇನೆ ಅಂತ. ಆದರೆ. ಬಿಜೆಪಿ ಬರೋ ಮುಂಚಿತವಾಗಿ ಸಂಘಟನೆಯಲ್ಲಿ ಇದ್ದವನು ನಾನು, ಕಾಂಗ್ರೆಸ್ ನಿಂದ ಟಿಕೆಟ್ ನೀಡುತ್ತೇವೆ ಅಂತ ಬಹಳ ಒತ್ತಡ ಇತ್ತು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಯಾವುದಕ್ಕೂ ಮಣಿಯದೆ ಬಿಜೆಪಿಯಲ್ಲಿ ಇದ್ದೇನೆ. ಹೀಗಾಗಿ ರಘುಪತಿ ಭಟ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: ಬೆಂಗಳೂರಿನಲ್ಲಿ ಬಿಪಿಎಲ್‌ನಿಂದ ಹೊಸ ಘಟಕ ಸ್ಥಾಪನೆ: ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗ!