BIG 3: ಅಂಗನವಾಡಿ ಕಂದಮ್ಮಗಳಿಗೆ ಜಾಗವಿಲ್ಲ: ಇಡೀ ಊರ ಜನರಿಗೆ ಆ 'ಭಯ'
ಜೇವರ್ಗಿ ತಾಲೂಕಿನ ಕೋಬಾಳ ಗ್ರಾಮದ ಮಕ್ಕಳಿಗೆ ಅಂಗನವಾಡಿ ಶಾಲೆ ಇದ್ದು ಇಲ್ಲದಂತಾಗಿದೆ. ದಿನವಿಡೀ ಇಲ್ಲಿನ ಮಕ್ಕಳು ಅಂಗನವಾಡಿಯಿಂದ ಹೊರಗೆ ಕಳೆಯುತ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಬಾಳ ಗ್ರಾಮದ ಅಂಗನವಾಡಿ ಕೇಂದ್ರ ಕುಸಿತಕ್ಕೊಳಗಾಗಿದೆ. ಆಗಾಗಿ ಇಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠ ಮಾಡಲಾಗುತ್ತಿಲ್ಲ. ಹೊಸ ಕಟ್ಟಡಕ್ಕೆ ಗ್ರಾಮದಿಂದ 2 ಕಿಲೋ ಮೀಟರ್ ದೂರದಲ್ಲಿರುವ ಕೋಬಾಳ ವಾರಿ ಎನ್ನುವ ಎಂಬಲ್ಲಿ ಮಂಜೂರಾತಿ ಸಿಕ್ಕಿದೆ. ಪುಟ್ಟ ಮಕ್ಕಳನ್ನು ಊರಿನಿಂದ 2 ಕಿ.ಮೀ ಹೊರಗಿರೋ ಅಷ್ಟು ದೂರದ ಶಾಲೆಗೆ ಕಳುಹಿಸೋಕೆ ಆಗಲ್ಲ ಅಂತಾರೆ ಪೋಷಕರು. ಹಾಗಾಗಿ ಆ ನೂತನ ಅಂಗನವಾಡಿ ಕಟ್ಟಡವನ್ನು ದೂರು ಕೊಟ್ಟು ನಿಲ್ಲಿಸಿದ್ದಾರಂತೆ ಗ್ರಾಮಸ್ಥರು. ಈಗ ಕೋಬಾಳ ಗ್ರಾಮದಲ್ಲಿನ ತೀರಾ ಪುಟ್ಟದಾದ ಗುಡಿಸಲು ರೀತಿಯ ಜಾಗದಲ್ಲಿ ಅಂಗವಾಡಿ ನಡೆಸಲಾಗುತ್ತಿದೆ. ಆ ಮನೆಯಲ್ಲಿ ಕೆಲ ತಿಂಗಳ ಹಿಂದಷ್ಟೇ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರಂತೆ. ಆಗಾಗಿ ಈ ಸ್ಥಳಕ್ಕೆ ಯಾರೂ ಮಕ್ಕಳನ್ನು ಕಳುಹಿಸುತ್ತಿಲ್ಲ. ಇದರಿಂದಾಗಿ ನಮಗೆ ಊರೊಳಗೆ ಬೇರೆ ಶಾಲೆಯ ವ್ಯವಸ್ಥೆ ಮಾಡಿ ಕೊಡಿ ಅಂತಾ ಗ್ರಾಮಸ್ಥರೆಲ್ಲಾ ಮನವಿ ಮಾಡ್ತಿದ್ದಾರೆ.