News Hour Special: ಎಲೆಕ್ಷನ್ ಟೈಮಲ್ಲಿ 'ಪಂಚಮಸಾಲಿ ಕದನ': ಕೂಡಲಸಂಗಮದ ಶ್ರೀಗಳು ಹೇಳಿದ್ದೇನು?

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. 
 

Share this Video
  • FB
  • Linkdin
  • Whatsapp

ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಕೂಡಲಸಂಗಮದ ಜಯ ಮೃತ್ಯುಂಜಯ ಶ್ರೀಗಳು ಮಾತನಾಡಿದ್ದು, ಅವರನ್ನು ಒಪ್ಪುವ ಹಾಗೂ ವಿರೋಧಿಸುವ ಎಲ್ಲರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಹಿಂದೂ ನಾವೆಲ್ಲಾ ಒಂದು ಎನ್ನುವಂತವರನ್ನು ಕರೆದುಕೊಂಡು ಬಂದು ಇದು ಬರೀ ಲಿಂಗಾಯತ ಹೋರಾಟ ಅಲ್ಲ, ಪಂಚಮಸಾಲಿ ಹೋರಾಟಕ್ಕೂ ತೊಡಗಿಕೊಂಡಿದ್ದಾರೆ. ಭಾರತ ಯಾವತ್ತು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತ ರಾಷ್ಟ್ರ ಹಾಗಾಗಿ ಭಾಷೆಯಿಂದ ಕನ್ನಡಿಗರು ದೇಶದಿಂದ ಭಾರತೀಯರು, ಧಾರ್ಮಿಕವಾಗಿ ಲಿಂಗಾಯತರು, ಸಮುದಾಯ ಅಂತ ಬಂದಾಗ ಪಂಚಮಸಾಲಿ ಎನ್ನುವ ಅಭಿಮಾನ ಎಂದು ಹೇಳಿದರು. ಹಾಗೆ ರಾಜ್ಯ ಸರ್ಕಾರ ಅಥವಾ ಕೆಂದ್ರ ಸರ್ಕಾರವಾಗಿರಬಹುದು ದೇಶದಲ್ಲಿ ಬಂದಂತಹ ಸಂಪತ್ತನ್ನು ಸಮ ಬಾಳು ಸಮ ಪಾಲು ರೀತಿಯಲ್ಲಿ ಹಂಚಿಕೆ ಮಾಡಿದ್ದರೆ ಈ ರೀತಿಯಾಗಿ ಬಲಿಷ್ಠ ಮತ್ತು ಕನಿಷ್ಠ ಎನ್ನುವ ಭೇದ ಭಾವ ಬರುತ್ತಿರಲಿಲ್ಲ. ದೇಶದ ಒಟ್ಟು ಸಂಪತ್ತು ಏನು ಇದೆ 82 % ಉತ್ಪಾದಕ ವರ್ಗವಿದೆ. ಈ ಉತ್ಪಾದಕ ವರ್ಗಕ್ಕೆ ಸಮಾನವಾಗಿ ಪಾಲನ್ನು ಹಂಚಿಬಿಟ್ಟಿದ್ರೆ ಈ ಅಸಮಾನತೆ ಬರುತ್ತಿರಲಿಲ್ಲ ಎಂದು ಹೇಳಿದರು.

ಎಸ್ಸಿ-ಎಸ್ಟಿ ಮೀಸಲು ಕಣ್ಣೊರೆಸೋ ತಂತ್ರವೇ?: ಸಿದ್ದರಾಮಯ್ಯ

Related Video