Big 3 Impact: 3 ದಶಕಗಳ ಹೋರಾಟಕ್ಕೆ ಸಿಕ್ತು ಮುಕ್ತಿ: ಕಡಲಿನ ಮಕ್ಕಳ ಗೋಳು ಕೇಳಿಸಿಕೊಂಡ ಶಾಸಕ ರಘುಪತಿ ಭಟ್

ಹಕ್ಕು ಪತ್ರವಿಲ್ಲದೆ ದಶಕಗಳಿಂದ ಒದ್ದಾಡುತ್ತಿದ್ದ ಮಲ್ಪೆ ಸಮೀಪದ ಪಡುಕೆರೆ, ಶಾಂತಿನಗರ, ಮಲ್ಪೆ ಸೆಂಟ್ರಲ್, ಕೊಳ ವಾರ್ಡ್ ಜನರಿಗೆ ಮುಕ್ತಿ ಸಿಕ್ಕಂತಾಗಿದೆ.
 

Share this Video
  • FB
  • Linkdin
  • Whatsapp

ಮಲ್ಪೆ ಪರಿಸರದ ಹಕ್ಕು ಪತ್ರ ಸಮಸ್ಯೆ ಕುರಿತು ವರದಿ ಬೆನ್ನಲ್ಲೇ ಇಂಪ್ಯಾಕ್ಟ್ ಆಗಿದ್ದು, ಜನವರಿ 15ರೊಳಗೆ ಸಂತ್ರಸ್ಥರಿಗೆ ಹಕ್ಕು ಪತ್ರ ಸಿಗಲಿದೆ. ಬಿಗ್‌3 ವರದಿಗೆ ಶಾಸಕ ರಘುಪತಿ ಭಟ್ ತಕ್ಷಣ ಸ್ಪಂದಿಸಿದ್ದಾರೆ. ನನ್ನ ಕ್ಷೇತ್ರದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದ. 2008ರಲ್ಲಿ ಶಾಸಕನಾಗಿದ್ದಾಗ ಒಂದು ಹಂತದ ಪರಿಹಾರ ನೀಡಿದ್ದೆ. ಕೆಲವು ತಾಂತ್ರಿಕ ಕಾರಣದಿಂದ ಹಕ್ಕು ಪತ್ರ ಕೊಡಲು ಆಗಿರಲಿಲ್ಲ. ಜನವರಿ 15ರೊಳಗೆ 143ಮನೆಗಳಿಗೆ ಹಕ್ಕು ಪತ್ರ ನೀಡುತ್ತೇನೆ. ಹಕ್ಕು ಪತ್ರ ನೀಡುವ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ಬಂದಿದೆ. ಸಂತ್ರಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ನಿಗದಿತ ದಿನಾಂಕದೊಳಗೆ ಹಕ್ಕು ಪತ್ರ ನೀಡದಿದ್ದರೆ ಪ್ರಶ್ನೆ ಮಾಡಿ ಎಂದು ಹೇಳಿದ್ದಾರೆ.

Related Video