MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಶಿವಮೊಗ್ಗದ ಶರಾವತಿ ಹಿನ್ನೀರಿನಲ್ಲಿ ಮುಪ್ಪಾನೆ ಲಾಂಚ್ ಪುನಾರಂಭ! ಕಸವಳ್ಳಿಯಿಂದ ದಡದಿಂದ ಬಂದ ಲಾಂಚ್!

ಶಿವಮೊಗ್ಗದ ಶರಾವತಿ ಹಿನ್ನೀರಿನಲ್ಲಿ ಮುಪ್ಪಾನೆ ಲಾಂಚ್ ಪುನಾರಂಭ! ಕಸವಳ್ಳಿಯಿಂದ ದಡದಿಂದ ಬಂದ ಲಾಂಚ್!

ಶಿವಮೊಗ್ಗದ ಸಾಗರ ತಾಲೂಕಿನ ಮುಪ್ಪಾನೆ ಲಾಂಚ್ ತಾಂತ್ರಿಕ ದೋಷದಿಂದ 22 ದಿನಗಳಿಂದ ಸ್ಥಗಿತಗೊಂಡು ಜನರು ಪರದಾಡುವಂತಾಗಿತ್ತು. ಮಾಜಿ ಸಚಿವ ಎಚ್. ಹಾಲಪ್ಪ ಮಧ್ಯಪ್ರವೇಶದಿಂದ ಪರ್ಯಾಯ ದೊಡ್ಡ ಲಾಂಚ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಕರೂರು ಮತ್ತು ಭಾರಂಗಿ ಹೋಬಳಿಗಳ ನಡುವಿನ ಸಂಪರ್ಕ ಮರುಸ್ಥಾಪನೆಗೊಂಡಿದೆ.

1 Min read
Author : Sathish Kumar KH | Kannada Prabha
Published : Sep 21 2026, 05:49 AM IST
Share this Photo Gallery
  • FB
  • TW
  • Linkdin
  • Whatsapp
14
Image Credit : Asianet News

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭಾರಂಗಿ ಹೋಬಳಿಯ ಮುಪ್ಪಾನೆ ಲಾಂಚ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದಿಂದಾಗಿ ಕಳೆದ 22 ದಿನಗಳಿಂದ ಸ್ಥಗಿತಗೊಂಡಿದ್ದ ಲಾಂಚ್ ಸೇವೆಯನ್ನು ಪುನರಾರಂಭಿಸಲಾಗಿದೆ. ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್. ಹಾಲಪ್ಪ ಅವರ ವಿಶೇಷ ಮುತುವರ್ಜಿಯಿಂದಾಗಿ ಪರ್ಯಾಯವಾಗಿ ದೊಡ್ಡ ಲಾಂಚ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪರದಾಟಕ್ಕೆ ತೆರೆಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
Image Credit : Asianet News

ಲಾಂಚ್ ಸೇವೆ ಸ್ಥಗಿತದಿಂದ ಉಂಟಾದ ಸಮಸ್ಯೆ:

ಮುಪ್ಪಾನೆ ಲಾಂಚ್ ತಳದಲ್ಲಿ ರಂಧ್ರವಾಗಿದ್ದರಿಂದ ಕಳೆದ 22 ದಿನಗಳಿಂದ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಕರೂರು ಹಾಗೂ ಭಾರಂಗಿ ಹೋಬಳಿ ನಡುವಿನ ನೇರ ಸಂಪರ್ಕ ಕಡಿತಗೊಂಡಿತ್ತು. ಕೇವಲ 38 ಕಿ.ಮೀ. ಕ್ರಮಿಸಬೇಕಿದ್ದ ದೂರಕ್ಕೆ ಸಾರ್ವಜನಿಕರು 78 ಕಿ.ಮೀ. ಸುತ್ತು ಬಳಸಿ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿತ್ತು. ಜೋಗ ಜಲಪಾತ, ಕಾರ್ಗಲ್ ಭಾಗದಿಂದ ಸಿಗಂದೂರು ಮತ್ತು ತುಮರಿಗೆ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳು ಕೇವಲ ಸ್ಥಳ ಪರಿಶೀಲನೆ ನಡೆಸಿ ಸುಮ್ಮನಾಗಿದ್ದರು ಹೊರತು ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿರಲಿಲ್ಲ.

Related Articles

Related image1
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಬರೋಬ್ಬರಿ ₹380 ಕೋಟಿ ಅಕ್ರಮ ಪಾವತಿ: ಗಂಭೀರ ಆರೋಪ
Related image2
ಶಿವಮೊಗ್ಗ ಶರಾವತಿ ಹಿನ್ನೀರಿನ ಜನರು ಹಾಗೂ ಪ್ರವಾಸಿಗರಿಗೆ ಸಿಹಿ ಸುದ್ದಿ; ಇಂದಿನಿಂದ ಲಾಂಚ್ ಸೇವೆ ಪುನಾರಂಭ!
34
Image Credit : Asianet News

ಎಚ್. ಹಾಲಪ್ಪ ಮಧ್ಯಪ್ರವೇಶ:

ಗ್ರಾಮಸ್ಥರ ಅಳಲನ್ನು ಆಲಿಸಿದ ಮಾಜಿ ಸಚಿವ ಎಚ್. ಹಾಲಪ್ಪ, ಕೂಡಲೇ ಒಳನಾಡು ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ನಿರಂತರ ಮಾತುಕತೆ ನಡೆಸಿದರು. ಸಿಗಂದೂರು ಸೇತುವೆ ನಿರ್ಮಾಣದ ಬಳಿಕ ಕಳಸವಳ್ಳಿ ದಡದಲ್ಲಿ ನಿಂತಿದ್ದ ದೊಡ್ಡ ಲಾಂಚನ್ನು ಮುಪ್ಪಾನೆ ದಡಕ್ಕೆ ತಂದು ಸೇವೆ ಒದಗಿಸುವಂತೆ ಒತ್ತಡ ತಂದರು.

44
Image Credit : Asianet News

ಅಧಿಕಾರಿಗಳು ಸ್ಪಂದಿಸಿ ಮುಪ್ಪಾನೆ ದಡದಲ್ಲಿ ದೊಡ್ಡ ಲಾಂಚ್ ಮೂಲಕ ಕಡವು ಸೇವೆಗೆ ಚಾಲನೆ ನೀಡಿದ್ದಾರೆ. ಇದರಿಂದಾಗಿ ಎರಡೂ ಹೋಬಳಿಗಳ ನಡುವಿನ ಸಂಪರ್ಕ ಮರುಸ್ಥಾಪನೆಗೊಂಡಿದ್ದು, ಸಾರ್ವಜನಿಕರು ನಿರಾಳರಾಗಿದ್ದಾರೆ. ಮುಪ್ಪಾನೆ ಲಾಂಚ್ ಸ್ಥಳಕ್ಕೆ ಭೇಟಿ ನೀಡಿದ ಎಚ್. ಹಾಲಪ್ಪ ಸಾರ್ವಜನಿಕರೊಂದಿಗೆ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸಿ. ಲಕ್ಷ್ಮೀನಾರಾಯಣ ಸೇರಿದಂತೆ ಹಲವುಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಮಾಜಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಶಿವಮೊಗ್ಗ
ಕರ್ನಾಟಕ ಸುದ್ದಿ
ಕರ್ನಾಟಕದ ನದಿಗಳು
 

Latest Videos
Recommended Stories
Recommended image1
ತಿರುಮಲದಲ್ಲಿರುವ ಗೆಸ್ಟ್‌ ಹೌಸ್‌ ವಶಕ್ಕೆ ರಾಜ್ಯ ಸರ್ಕಾರ ತೀರ್ಮಾನ, ಇದು ಮೈಸೂರು ಮಹಾರಾಜರು ನೀಡಿದ್ದು ಎಂದ ಟಿಟಿಡಿ
Recommended image2
ಕೋಲಾರದಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದ 341 ಎಕರೆ ಅಬ್ಬಣಿ ಕಿರು ಅರಣ್ಯ ಈಗ ಕಂದಾಯ ಭೂಮಿ, ಒತ್ತುವರಿದಾರರಿಗೆ ಹಬ್ಬ
Recommended image3
ಹೇಮಾವತಿ ಎಡದಂಡೆ ನಾಲಾ ವ್ಯಾಪ್ತಿ ವಿತರಣಾ ನಾಲೆ ಅತಿಕ್ರಮಣ, ಕಂದಾಯ ಇಲಾಖೆ ನಿವೃತ್ತ ಶಿರಸ್ತೇದಾರನ ಕೈವಾಡ!
Related Stories
Recommended image1
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಬರೋಬ್ಬರಿ ₹380 ಕೋಟಿ ಅಕ್ರಮ ಪಾವತಿ: ಗಂಭೀರ ಆರೋಪ
Recommended image2
ಶಿವಮೊಗ್ಗ ಶರಾವತಿ ಹಿನ್ನೀರಿನ ಜನರು ಹಾಗೂ ಪ್ರವಾಸಿಗರಿಗೆ ಸಿಹಿ ಸುದ್ದಿ; ಇಂದಿನಿಂದ ಲಾಂಚ್ ಸೇವೆ ಪುನಾರಂಭ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved