BIG 3: ವಿಜಯಪುರದಲ್ಲಿ ನೀರಿಗಾಗಿ ಪರದಾಟ: ಐದು ನದಿಗಳು ಹರಿದರೂ ನಿಂತಿಲ್ಲ ಹಾಹಾಕಾರ

ವಿಜಯಪುರ ನಗರದಲ್ಲಿ ನೀರಿಗೆ ಉಂಟಾಗಿರೋ ಹಾಹಾಕಾರದ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಿ‌. ಈ ಕುರಿತು ಇಲ್ಲಿದೆ ಡಿಟೇಲ್ಸ್.
 

First Published Feb 14, 2023, 3:20 PM IST | Last Updated Feb 14, 2023, 3:20 PM IST

ಗುಮ್ಮಟನಗರಿ ವಿಜಯಪುರ ನಗರ ಹಾಗೂ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ವಾರ್ಡ್'ಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕಳೆದ ಮೂರು ವರ್ಷಗಳ ಹಿಂದೆ ನಗರದೆಲ್ಲೆಡೆ 24 * 7 ನೀರಿನ ನಳಗಳ ಕನೆಕ್ಷನ್‌ ನೀಡಲಾಗಿದೆ. ಆದ್ರೆ ನಗರದ ಕೆಲ ಹೈಪೈ ಏರಿಯಾಗಳನ್ನ ಬಿಟ್ಟರೆ ಬಹುತೇಕ ಭಾಗಗಳಲ್ಲಿ ಈವರೆಗೆ ನಿರಂತರ ಕುಡಿಯುವ ನೀರು ಬಂದಿಲ್ಲ. ಪರಿಣಾಮ ಮೂರು ವರ್ಷಗಳ ಹಿಂದೆ ಅಳವಡಿಕೆ ಮಾಡಲಾಗಿದ್ದ ನೀರಿನ ನಳಗಳು ಕಿತ್ತು ಹೋಗಿವೆ. ಕೆಲ ಏರಿಯಾಗಳ ಜನರು 15 ದಿನಗಳಿಗೊಮ್ಮೆ ನೀರು ನೋಡುವಂತಾಗಿದೆ. ನಗರ ಪ್ರದೇಶದಲ್ಲೇ ನೀರಿಗಾಗಿ ಈ ರೀತಿಯ ಹಾಹಾಕಾರ ಇದ್ರೆ, ಇನ್ನು ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ನೆನಪಿಸಿಕೊಳ್ಳೊದು ಬೇಡ ಅನ್ಸುತ್ತೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Kantara: ವರಾಹರೂಪಂ ಹಾಡಿಗೆ ನೃತ್ಯ: ವಿದ್ಯಾರ್ಥಿ ಮೇಲೆ ಪಂಜುರ್ಲಿ ದೈವ ಆವಾಹನೆ