Kantara: ವರಾಹರೂಪಂ ಹಾಡಿಗೆ ನೃತ್ಯ: ವಿದ್ಯಾರ್ಥಿ ಮೇಲೆ ಪಂಜುರ್ಲಿ ದೈವ ಆವಾಹನೆ

ದ್ವಿತೀಯ ಪಿಯುಸಿ ವಿದ್ಯಾರ್ಥಿ ಪಂಜುರ್ಲಿ ದೈವದ ವೇಷಭೂಷಣ ಧರಿಸಿ ಕಾಂತಾರ ಸಿನಿಮಾದ ವರಾಹರೂಪಂ ಹಾಡಿಗೆ ನೃತ್ಯ ಮಾಡಿದ್ದು, ಈ ವೇಳೆ ಪಂಜುರ್ಲಿ ದೈವ ಆವಾಹನೆ ಆಗಿದೆ.
 

Share this Video
  • FB
  • Linkdin
  • Whatsapp

'ಕಾಂತಾರ' ಸಿನಿಮಾದ 'ವರಾಹರೂಪಂ' ಹಾಡಿಗೆ ಪಂಜುರ್ಲಿ ದೈವದ ವೇಷ ಧರಿಸಿ ನರ್ತಿಸುತ್ತಿದ್ದ ವಿದ್ಯಾರ್ಥಿಯ ಮೈಮೇಲೆ ಇದ್ದಕ್ಕಿದ್ದಂತೆ ದೈವ ಆವಾಹನೆ ಆದಂತೆ ವರ್ತಿಸಿದ ಘಟನೆ ರಾಜಧಾನಿಯಲ್ಲಿ ನಡೆದಿದೆ. ಬೆಂಗಳೂರಿನ ಗಾಯತ್ರಿ ನಗರದ ಹೊಂಟೇಗೌಡ ಪಿಯು ಕಾಲೇಜಿನಲ್ಲಿ ಶನಿವಾರ ರಾತ್ರಿ ಅನ್ಯುವಲ್ ಡೇ ಫಂಕ್ಷನ್ ವೇಳೆ ಈ ಘಟನೆ ನಡೆದಿದೆ. ದ್ವಿತೀಯ ಪಿಯುಸಿಯ ವಿಶಾಲ್ ಎಂಬ ವಿದ್ಯಾರ್ಥಿ ಪಂಜುರ್ಲಿ ದೈವದ ವೇಷಭೂಷಣ ಧರಿಸಿ ಕಾಂತಾರ ಸಿನಿಮಾದ ವರಾಹರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ಹೀಗಾಗಿದೆ. ವಿದ್ಯಾರ್ಥಿಗಳು ಭಯ ಪಟ್ಟು ಗೊಂದಲ ಹಾಗೂ ಕೊಂಚ ಭಯದ ವಾತಾವರಣ ಸೃಷ್ಟಿಯಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Ram Charan Teja: ಆನಂದ್ ಮಹಿಂದ್ರಾಗೆ 'ನಾಟು ನಾಟು' ಸ್ಟೆಪ್ ಹೇಳಿಕೊಟ್ಟ ರಾಮ್ ಚರಣ್

Related Video