Asianet Suvarna News Asianet Suvarna News

ವೀರಪ್ಪನ್​ ಕಣ್ಣಿನಿಂದ ಬಚಾವ್​ ಆಗಿದ್ದ ಭೋಗೇಶ್ವರ: 'ಕಬಿನಿ ಶಕ್ತಿಮಾನ್'​ ಇಲ್ಲದೇ ಬಿಕೋ ಎನ್ನುತ್ತಿದೆ ಗುಂಡ್ರೆ ಅರಣ್ಯ!

*   ವಯೋಸಹಜದಿಂದ ಭೋಗೇಶ್ವರ ನಿಧನ 
*  ಭೋಗೇಶ್ವರ ಆನೆ ಕಳೆಬರಹ ಪತ್ತೆಯಾದ ಬಳಿಕ ಎಲ್ಲೆಡೆಯಿಂದ ಸಂತಾಪ 
*  ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಸೃಷ್ಟಿಸಿದ್ದ ಭೋಗೇಶ್ವರ ಆನೆ 

ಮೈಸೂರು(ಜೂ.15):  ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ. ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನೀಡ್ತಿದ್ದ ಭೋಗೇಶ್ವರ ವಯೋಸಹಜದಿಂದ ನಿಧನ ಹೊಂದಿದೆ. 

ಹೀಗೆ ಎಲ್ಲಿ ಬೇಕೆಂದಲ್ಲಿ ಆನೆಗಳು ಸತ್ತು ಬಿದ್ದಿರೋದನ್ನ ನೋಡಿದಾಕ್ಷಣ ನೆನಪಾಗೋದು ಅದೇ ಆ ಕಿರಾತಕ ವೀರಪ್ಪನ್​​. ವೀರಪ್ಪನ್​ ಯಾರಿಗೆ ಗೊತ್ತಿಲ್ಲ.. ದಟ್ಟ ಅರಣ್ಯದೊಳಗೆ ಕಳ್ಳರಂತೆ ಓಡಾಡಿಕೊಂಡಿದ್ರೂ ವಲ್ಡ್​ ಫೇಮಸ್​ ಆಗಿದ್ದ ಕಿರಾತಕ. ತನ್ನ ದುರಾಸೆಗಾಗಿ ಈತ ಅದೆಷ್ಟೋ ಅಮಾಯಕರ ಹೆಣಗಳನ್ನ ಬೀಳಿಸಿದ್ದ. ಅದರಲ್ಲೂ ಆನೆಗಳನ್ನ ಸಿಕ್ಕ ಸಿಕ್ಕಲ್ಲಿ ಹೊಡೆದುರುಳಿಸಿದ್ದ ಈ ಪಾಪಿ. 

ಹೆಂಡತಿಯ ಬರ್ತ್ ಡೇ ದಿನವೇ ಗಂಡನ ಡೆತ್ ಡೇ: ಅಪ್ಪನಾಗುವ ಹೊತ್ತಲ್ಲೇ ಅಂತ್ಯ

ಅದು ವೀರಪ್ಪನ್​ ಅಟ್ಟಹಾಸದ ದಿನಗಳು, ವೀರಪ್ಪನ್​ ಹೆಸರು ಕೇಳಿದ್ರೆ ಸಾಕು ಎಂಥವರು ಕೂಡಾ ಬೆಚ್ಚಿಬೀಳೋರು. ನೋಡೋದಕ್ಕೆ ನರಪೇತಲೆ ಅನ್ನೊ ಹಾಗಿದ್ದರೂ ಉದ್ದದ ಮೀಸೆಯs ಮೇಲೆ ಕೈಯಾಡಿಸುತ್ತ ಬಂದ್ರೆ, ಎದುರಿಗೆ ಎಷ್ಟೆ ಗಟ್ಟಿಗುಂಡಿಗೆಯವನಿದ್ದರೂ, ಸಣ್ಣಗೆ ಬೆವತು ಬಿಡೋನು. ಅಂಥಾ ವೀರಪ್ಪನ್​ ಆನೆಗಳನ್ನ ಲೆಕ್ಕವಿಲ್ಲದಷ್ಟು ಆನೆಗಳನ್ನ ಕೊಂದು ಅವುಗಳ ದಂತಗಳನ್ನ ಕದ್ದೊಯ್ಯೊದೇ ಮುಖ್ಯ ಕಸುಬು ಮಾಡಿಕೊಂಡಿದ್ದ. ಆ ಸಮಯದಲ್ಲಿ ಆನೆಗಳು ವೀರಪ್ಪನ್​ ಹೆಜ್ಜೆ ಸಪ್ಪಳ ಕೇಳಿದ್ರೆ ಸಾಕು, ಜೀವ ಭಯಕ್ಕೆ ಅಷ್ಟು ದೈತ್ಯ ದೇಹವನ್ನೇ ಹೊತ್ತಿಕೊಂಡು ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದವು. ಆದರೂ ಆ ಆನೆಗಳ ಹಿಂಡಿನಲ್ಲಿ ಆ ಒಂದು ಆನೆ ಇತ್ತು ನೋಡಿ, ಅದು ಸೈಲೆಂಟಾಗೇ  ವೀರಪ್ಪನ್​ ಕಣ್ಣಿಗೆ ಬೀಳದೇ ಓಡಾಡುತ್ತಿತ್ತು.. ಅದರ ಹೆಸರೇ ಭೋಗೇಶ್ವರ..

ಕೆಜಿಎಫ್​ ರಾಕಿಭಾಯ್​ ಯಾರಿಗೆ ಗೊತ್ತಿಲ್ಲ ಹೇಳಿ. ಹ್ಯಾಂಡ್​ಸಮ್​ ಎಂಡ್​ ಡೇರಿಂಗ್​ನೆಸ್​​ಗೆ ಇಡೀ ಜಗತ್ತೇ ಫಿದಾ ಆಗಿ ಹೋಗಿದೆ. ಅದರಲ್ಲೂ ರಾಕಿಭಾಯ್​ ಒಂದೊಂದು ಹೆಜ್ಜೆ ಇಟ್ಟು ಬರ್ತಿದ್ರೆ​​, ಪ್ರೇಕ್ಷಕರು ಒಂದೆರಡು ಕ್ಷಣ ಸ್ಟನ್​ ಆಗ್ಬಿಡೋರು. ಆ ಸ್ಪೆಷಲ್​ ವಾಕಿಂಗ್​ ಸ್ಟೈಲ್​ನ್ನೇ ಮೀರಿಸೋ ಹಾಗಿತ್ತು ಈ ಭೋಗೇಶ್ವರನ ವಾಕಿಂಗ್​ ಸ್ಟೈಲ್​. ಆ ನಡಿಗೆಗೆ ಇನ್ನಷ್ಟು ಮೆರಗು ತಂದ ಹಾಗಿತ್ತು ಈ ಭೋಗೇಶ್ವರ ಆನೆಗಿದ್ದ ಉದ್ದನೇಯ ದಂತ. 
ಹೌದು ವೀಕ್ಷಕರೇ ನೀಳ ದಂತ, ಸುಂದರ ನಡಿಗೆ.. ಇದೇ ಈ ಆನೆಯ ವಿಶೇಷ. ಒಂದೊಂದು ಹೆಜ್ಜೆ ಇಡ್ತಿದ್ರೆ, ಅದು ರಾಜನಡಿಗೆಯಂತಿರ್ತಿತ್ತು. ಅದನ್ನ ಕಣ್ತುಂಬಿಸಿಕೊಳ್ಳೊದಕ್ಕಂತಾನೇ ದೂರದೂರಿನಿಂದ ಪ್ರವಾಸಿಗರು ಈ ಆನೆಯನ್ನ ಹುಡುಕಿಕೊಂಡು ಬರುತ್ತಿದ್ದರು. ಇನ್ನೂ ಈ ಆನೆಯ ದಂತದ ಬಗ್ಗೆಯಂತೂ ನಿಮಗೆ ಹೇಳಲೇ ಬೇಕು. ಈ ಆನೆಯ ದಂತ ನೋಡ್ತಿದ್ರೆ ಎಂಥವರ ದೃಷ್ಟಿ ಕೂಡಾ ಆಗುವಂತಿದೆ. ಬಿಕಾಸ್​ ಏಷ್ಯಾದಲ್ಲೇ ಅತಿ ಉದ್ದನೇಯ ದಂತ ಹೊಂದಿರೋ ಆನೆ ಇದಾಗಿದೆ. 

ಹೌದು.. ಈ ಆನೆ ದಂತವನ್ನ ನೋಡ್ತಿದ್ರೆ ಎಂಥವರೂ ಕೂಡಾ ನಿಬ್ಬೆರಗಾಗಿ ಬಿಡ್ತಾರೆ. ಇದು ಹುಲ್ಲು ತಿನ್ನೊಕೆ ಅಂತ ಬಗ್ಗಿದ್ರೆ ಸಾಕು.. ಸೊಂಡಿಲು ನೆಲಕ್ಕೆ ತಾಕುವ ಮುನ್ನವೇ ದಂತ ನೆಲಕ್ಕೆ ತಾಕುತ್ತಿರುತ್ತೆ. ಇಷ್ಟು ಉದ್ದದ ದಂತವೇ ಈ ಆನೆಯ ಮೆರಗನ್ನ ಇನ್ನಷ್ಟು ಹೆಚ್ಚು ಮಾಡಿತ್ತು. ಇದೆ ಕಾರಣಕ್ಕೆ ಈ ಆನೆಗೆ ಕಬಿನಿ ಶಕ್ತಿಮಾನ್​ ಅಂತನೂ ಕರೆಯುತ್ತಿದ್ದರು. ಇನ್ನು ಮುಂದೆ ಈ ಆನೆಯನ್ನ, ಇದರ ಉದ್ದನೆಯ ದಂತವನ್ನ, ಇದರ ಸೊಬಗಿನ ನಡಿಗೆಯನ್ನ ನೋಡಲು ಸಿಗುವುದಿಲ್ಲ ಕಾರಣ ಈ ಭೋಗೇಶ್ವರ ಇನ್ಮುಂದೆ ನೆನಪು ಮಾತ್ರ. 

18 ತಿಂಗಳಲ್ಲಿ 10 ಲಕ್ಷ ಉದ್ಯೋಗ ನೇಮಕಾತಿ, ಸಂಚಲನ ಸೃಷ್ಟಿಸಿದ ಪ್ರಧಾನಿ ಮೋದಿ ಘೋಷಣೆ!

ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ. ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನಿಡ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ. 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣ, ಸುಮಾರು 4 ಅಡಿಗೂ ಉದ್ದದ ನೀಳ ದಂತ, ಸುಂದರ ನಡಿಗೆ ಮೂಲಕವೇ ಪ್ರಾಣಿಪ್ರಿಯರ ಮನಗೆದ್ದಿತ್ತು. 
ಭೋಗೇಶ್ವರ ಆನೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಸೃಷ್ಟಿಸಿತ್ತು. ಎಲ್ಲಾ ಜಾಲತಾಣಗಳಲ್ಲಿ ಭೋಗೇಶ್ವರ ಫೋಟೋ ಸಾಕಷ್ಟು ಸದ್ದು ಮಾಡಿತ್ತು. ಭೋಗೇಶ್ವರ ಫೋಟೋ ಲಕ್ಷಾಂತರ ಲೈಕ್ ಪಡೆದಿತ್ತು. ದಂತವನ್ನ ನೋಡಿದ ಜನ ನಿಬ್ಬೆರಗಾಗಿದ್ರು. ಅಷ್ಟು ಹೆಸರು ವಾಸಿಯಾಗಿದ್ದ ಆನೆ ಸಾವನಪ್ಪಿದ್ದು , ಕಬಿನಿ ಕಾಡು ಬಡವಾಗಿದೆ.

ಭೋಗೇಶ್ವರ ಆನೆ ಕಳೆಬರಹ ಪತ್ತೆಯಾದ ಬಳಿಕ ಎಲ್ಲೆಡೆಯಿಂದ ಸಂತಾಪ ವ್ಯಕ್ತವಾಗುತ್ತಿದೆ. ಅಪರೂಪದಲ್ಲಿ ಅಪರೂಪ ಎಂಬಂತೆ ಕಬಿನಿ ಸುತ್ತಮುತ್ತ ಆನೆ ದರ್ಶನ ನೀಡುತ್ತಿತ್ತು. ವಯೋಸಹಜವಾಗಿ ಭೋಗೇಶ್ವರ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಒಟ್ಟಿನಲ್ಲಿ ಭೋಗೇಶ್ವರ ಆನೆ ಸಾವು ಎಲ್ಲೆಡೆ ತೀವ್ರ ದುಃಖ ತಂದಿದ್ದು, ಪ್ರಾಣಿಪ್ರಿಯರು ತೀವ್ರ ಬೇಸರಗೊಂಡಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಅಂತ್ಯಕ್ರಿಯೆ ಕೂಡ ನೆರವೇರಿಸಿದ್ದು, ಬೋಗೇಶ್ವರನ ನೆನಪು ಅಳಿಸದ ರೀತಿ ಏನಾದರು ಕೆಲಸ ಮಾಡಲು ಚಿಂತನೆ ನಡೆಸಿದ್ದಾರೆ.