ಭವ್ಯಾ ನರಸಿಂಹಮೂರ್ತಿ ಇನ್ಮುಂದೆ ಲೆಫ್ಟಿನೆಂಟ್‌! ಇಂಡೋ-ಪಾಕ್ LOC ಬಳಿಯ ಸೇನಾ ಘಟಕದಲ್ಲಿ ನೇಮಕ!

ಪ್ರಾದೇಶಿಕ ಸೇನೆಗೆ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ನಿಯೋಜನೆ!
ಕಾಂಗ್ರೆಸ್‌ನ ವಕ್ತಾರೆಯಾಗಿ ಪರಿಚಯರಾಗಿದ್ದ ಭವ್ಯಾ ಈಗ ಲೆಫ್ಟಿನೆಂಟ್‌ ಭವ್ಯಾ!
ಲೆಫ್ಟಿನೆಂಟ್‌ ಆಗಿ ನಿಯೋಜನೆಗೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಭವ್ಯಾ

First Published Jun 2, 2024, 6:10 PM IST | Last Updated Jun 2, 2024, 6:11 PM IST

ಕಾಂಗ್ರೆಸ್‌ ಪಕ್ಷದ ವಕ್ತಾರೆ ಹಾಗೂ ಸೋಶಿಯಲ್‌ ಮೀಡಿಯಾ ವಿಭಾಗದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಭವ್ಯಾ ನರಸಿಂಹಮೂರ್ತಿ(Bhavya Narasimhamurthy) ದೇಶದ ಟೆರಿಟರಿಯಲ್‌ ಆರ್ಮಿಗೆ ನಿಯೋಜನೆಗೊಂಡಿದ್ದಾರೆ. ಇಲ್ಲಿಯವರೆಗೂ ಕಾಂಗ್ರೆಸ್‌ನ(Congress) ವಕ್ತಾರೆಯಾಗಿ ಜನರಿಗೆ ಪರಿಚಯರಾಗಿದ್ದ ಭವ್ಯಾ ನರಸಿಂಹಮೂರ್ತಿ ಈಗ ಲೆಫ್ಟಿನೆಂಟ್‌ ಭವ್ಯಾ ನರಸಿಂಹ ಮೂರ್ತಿಯಾಗಿದ್ದಾರೆ. ತಾವು ದೇಶದ ಟೆರಿಟರಿಯಲ್‌ ಆರ್ಮಿ(Territorial Army) ಅಂದರೆ, ಪ್ರಾದೇಶಿಕ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ನಿಯೋಜನೆಗೊಂಡಿರುವ ಬಗ್ಗೆ ಭವ್ಯಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಎನ್ನುವ ಶ್ರೇಯಕ್ಕೂ ಲೆಫ್ಟಿನೆಂಟ್‌ ಭವ್ಯಾ ನರಸಿಂಹ ಮೂರ್ತಿ ಪಾತ್ರರಾಗಿದ್ದಾರೆ.2022ರ ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ(Woman Territorial Army Officer) ಎನ್ನುವ ಗೌರವವೂ ಭವ್ಯಾ ನರಸಿಂಹಮೂರ್ತಿ ಅವರದ್ದಾಗಿದೆ.

ಇದನ್ನೂ ವೀಕ್ಷಿಸಿ:  CT Ravi: 95ನೇ ಇಸವಿಯಿಂದ ನಾನು ಯಾವುದನ್ನು ಕೇಳಿ ಪಡೆದಿಲ್ಲ,ಪಕ್ಷದ ಕೆಲಸ ಮಾಡುವುದಷ್ಟೇ ನನ್ನ ಕೆಲಸ: ಸಿಟಿ ರವಿ