CT Ravi: 95ನೇ ಇಸವಿಯಿಂದ ನಾನು ಯಾವುದನ್ನು ಕೇಳಿ ಪಡೆದಿಲ್ಲ,ಪಕ್ಷದ ಕೆಲಸ ಮಾಡುವುದಷ್ಟೇ ನನ್ನ ಕೆಲಸ: ಸಿಟಿ ರವಿ

ಪಕ್ಷದ ಕೆಲಸ ಮಾಡುವುದಷ್ಟೇ ನನ್ನ ಕೆಲಸ. ನನಗೇನು ಬೇಕು ಅದನ್ನ ಪಕ್ಷ ನಿರ್ಧಾರ ಮಾಡುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು: ವಿಧಾನಪರಿಷತ್ ಟಿಕೆಟ್ (Ticket) ಘೋಷಣೆ ಹಿನ್ನೆಲೆ ಸಿ.ಟಿ.ರವಿ(CT Ravi) ಚಿಕ್ಕಮಗಳೂರು(Chikkamagaluru) ನಗರಕ್ಕೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ನಗರದ ಹಿರೇಮಗಳೂರು ಸಮೀಪ ಸಿ.ಟಿ.ರವಿ ಪರ ಘೋಷಣೆ ಕೂಗಿ, ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಸಿ.ಟಿ. ರವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 95ನೇ ಇಸವಿಯಿಂದ ನಾನು ಯಾವುದನ್ನು ಕೇಳಿ ಪಡೆದಿಲ್ಲ. ಪಕ್ಷದ ಕೆಲಸ ಮಾಡುವುದಷ್ಟೇ ನನ್ನ ಕೆಲಸ. ನನಗೇನು ಬೇಕು ಅದನ್ನ ಪಕ್ಷ ನಿರ್ಧಾರ ಮಾಡುತ್ತೆ. ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾಳೆ ಮತದಾನ ಮಾಡಿ ಬೆಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಟಿ20 ವಿಶ್ವಕಪ್‌: ಕೆನಡಾ ಟೀಂನಲ್ಲಿ ದಾವಣಗೆರೆ ಯುವಕ!

Related Video