ಸರ್ಕಾರಿ ಸಂಸ್ಥೆಗಳಿಗೆ ಶಾಕ್ ಕೊಟ್ಟ ಬೆಸ್ಕಾಂ: ಕಟ್ಟಬೇಕಾದ ಬಿಲ್ ಎಷ್ಟು ಗೊತ್ತಾ?
ಕೋಟಿ ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಚೇರಿಗಳಿಗೆ ಬೆಸ್ಕಾಂ ನೋಟಿಸ್ ನೀಡಲು ಮುಂದಾಗಿದೆ.
ಬೆಂಗಳೂರು: ಗೃಹಜ್ಯೋತಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಆದ್ರೆ ಇದಕ್ಕೆ ಹಣದ ಕ್ರೂಢೀಕರಣ ಮಾಡಬೇಕಾದ ಅವಶ್ಯಕತೆ ಇದೆ. ಹಾಗಾಗಿ ಕರೆಂಟ್ ಬಿಲ್‌ನನ್ನು ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಚೇರಿಗಳಿಗೆ ನೋಟಿಸ್ ನೀಡಲು ಬೆಸ್ಕಾಂ ಮುಂದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಸ್ಕಾಂಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ. ಹಾಗಾಗಿ ಬೆಸ್ಕಾಂ ಸರ್ಕಾರಿ ಕಚೇರಿಗಳಿಗೆ ಬಿಲ್ ಕಟ್ಟುವಂತೆ ನೋಟಿಸ್ ನೀಡಲಿದ್ದು, ಒಂದು ವೇಳೆ ಕಟ್ಟದಿದ್ದರೇ ಕರೆಂಟ್ ಕಟ್ ಮಾಡುವ ಎಚ್ಚರಿಕೆಯನ್ನು ನೀಡಿದೆ. ಎಲ್ಲಾ ಸರ್ಕಾರಿ ಕಚೇರಿಗಳು ಸುಮಾರು 5,246 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ತಿಳಿದುಬಂದಿದೆ. ಬಿಬಿಎಂಪಿಯ ವಾರ್ಡ್ ಲೈಟ್ ಬಿಲ್ 640 ಕೋಟಿ ರೂಪಾಯಿ ಬಾಕಿ ಇದೆ.
ಇದನ್ನೂ ವೀಕ್ಷಿಸಿ: ಚಿಲ್ಲರೆ ಕಾಸಿಗಾಗಿ ಜೋಡಿ ಕೊಲೆ: ಸೈಕೋ ವ್ಯಕ್ತಿಯಿಂದ ಇಬ್ಬರ ಹತ್ಯೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ