Bengaluru: ಮೆಟ್ರೋ ಪಿಲ್ಲರ್‌ ಕುಸಿತ ಪ್ರಕರಣ: 25 ದಿನಗಳಲ್ಲೇ ತನಿಖೆ ಠುಸ್!

ನಮ್ಮ ಮೆಟ್ರೋ ಪಿಲ್ಲರ್‌ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ 25 ದಿನಗಳಾದರೂ ಯಾವುದೇ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಕೇವಲ ಕೆಲವು ಮೆಟ್ರೋ ಅಧಿಕಾರಿಗಳನ್ನು ವಿಚಾರಿಸಿ ಖಾಕಿ ಪಡೆ ಸುಮ್ಮನಾಗಿದೆ. 

First Published Feb 3, 2023, 2:37 PM IST | Last Updated Feb 3, 2023, 2:37 PM IST

ಬೆಂಗಳೂರು (ಫೆ.03): ನಮ್ಮ ಮೆಟ್ರೋ ಪಿಲ್ಲರ್‌ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ 25 ದಿನಗಳಾದರೂ ಯಾವುದೇ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಕೇವಲ ಕೆಲವು ಮೆಟ್ರೋ ಅಧಿಕಾರಿಗಳನ್ನು ವಿಚಾರಿಸಿ ಖಾಕಿ ಪಡೆ ಸುಮ್ಮನಾಗಿದೆ. ಗುತ್ತಿಗೆ ಪಡೆದಂತಹ ನಾಗಾರ್ಜುನ ಕಂಪನಿ ಅಧಿಕಾರಿಗಳ ವಿಚಾರಣೆ ಸಹ ಬಾಕಿ ಇದೆ. ಇ-ಮೇಲ್ ಮೂಲಕ ಎನ್‌ಸಿಸಿ ಅಧಿಕಾರಿಗಳಿಗೆ ಎರಡನೇ ನೋಟಿಸನ್ನು ನೀಡಲಾಗಿದೆ. ಇತ್ತ ಮೆಟ್ರೋ ಅಧಿಕಾರಿಗಳು ಹಾಗೂ ನಾಗಾರ್ಜುನ ಕಂಪನಿ ಅಧಿಕಾರಿಗಳು ಕಿತ್ತಾಟ ಮಾಡಿಕೊಳ್ಳುತ್ತಿದ್ದಾರೆ. ಪರಸ್ಪರ ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಅಲ್ಲದೇ ವಿಚಾರಣೆ ವೇಳೆ ಮೆಟ್ರೋ ಅಧಿಕಾರಿಗಳು ನಮ್ಮದೇನು ತಪ್ಪಿಲ್ಲ ಎನ್ನುತ್ತಿದ್ದು, ಇತ್ತ ಎನ್‌ಸಿಸಿಯಿಂದ ಮೆಟ್ರೋ ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬರುತ್ತಿದೆ. ಇನ್ನೂ ಐಐಟಿ ವರದಿಯನ್ನು ಕೊಟ್ಟರೂ ಖಾಕಿ ಪಡೆ ಆರೋಪಿಗಳನ್ನ ಬಂಧಿಸಲು ಮೀನಾಮೇಷ ಎಣಿಸುತ್ತಿದೆ.