ಗುಡುಗಿದ ರೆಡ್ಡಿ ಬ್ರದರ್ಸ್, ವಿಜಯನಗರ ಜಿಲ್ಲೆ ವಿರೋಧಿಸಿ ಬಳ್ಳಾರಿ ಬಂದ್

ಬಳ್ಳಾರಿ ಮತ್ತೆ ಯಡಿಯೂರಪ್ಪರನ್ನು ಕಾಡಲು ಆರಂಭಿಸಿದೆ. ಈ ಬಾರಿ ಜಿಲ್ಲೆಯ ವಿಭಜನೆ ವಿಚಾರ, ಬಹಳ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ವಿಜಯನಗರ ಜಿಲ್ಲೆಯ ರಚನೆಗೆ ಬಿಜೆಪಿಯ ರೆಡ್ಡಿ ಸಹೋದರರಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ. 

First Published Sep 30, 2019, 5:53 PM IST | Last Updated Sep 30, 2019, 5:53 PM IST

ಬಳ್ಳಾರಿ (ಸೆ.30): ಬಳ್ಳಾರಿ ಮತ್ತೆ ಯಡಿಯೂರಪ್ಪರನ್ನು ಕಾಡಲು ಆರಂಭಿಸಿದೆ. ಈ ಬಾರಿ ಜಿಲ್ಲೆಯ ವಿಭಜನೆ ವಿಚಾರ, ಬಹಳ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ವಿಜಯನಗರ ಜಿಲ್ಲೆಯ ರಚನೆಗೆ ಬಿಜೆಪಿಯ ರೆಡ್ಡಿ ಸಹೋದರರಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ. ಸರ್ಕಾರ ಆ ಪ್ರಸ್ತಾಪ ಕೈಬಿಡದಿದ್ದರೆ, ಮಂಗಳವಾರ ಜಿಲ್ಲೆ ಬಂದ್ ಮಾಡೋದಾಗಿ ಎಚ್ಚರಿಸಿದ್ದಾರೆ. 

ಒಂದು ಕಡೆ ವಿಜಯನಗರ ಜಿಲ್ಲೆಗೆ ಆನಂದ್ ಸಿಂಗ್ ಸಿಎಂ ಬಿ.ಎಸ್. ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದರೆ, ಇನ್ನೊಂದು ಕಡೆ ರೆಡ್ಡಿ ಸಹೋದರರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಮಾತ್ರ ಇಕ್ಕಟ್ಟಿನಲ್ಲಿ ಸಿಕ್ಕುಹಾಕಿಕೊಂಡಿದ್ದಾರೆ.

ವಾಯುಸೇನೆ ಮುಖ್ಯಸ್ಥರಾಗಿ ಬದೌರಿಯಾ, ಅನರ್ಹರಿಗೆ ಮಣೆ ಎಂದ BSY: ಸೆ.30ರ ಟಾಪ್ ಸುದ್ದಿ!...