Asianet Suvarna News Asianet Suvarna News

ಸಾಯುವ ಮುನ್ನ ಕೊನೆಯದಾಗಿ ಪೇಪರ್‌ನಲ್ಲಿ ಬರೆದು ಕುಟುಂಬಸ್ಥರ ಬಳಿ ಶ್ರೀನಿವಾಸ್‌ ಪ್ರಸಾದ್‌ ಕೇಳಿದ್ದೇನು ?

ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ (76) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
 

ಸುಧೀರ್ಘ 50 ವರ್ಷಗಳ ರಾಜಕೀಯದಲ್ಲಿದ್ದ ಸಂಸದ ಶ್ರೀನಿವಾಸ್ ಪ್ರಸಾದ್‌( V Srinivasa Prasad), ಮಾರ್ಚ್ 17ಕ್ಕೆ ರಾಜಕೀಯಕ್ಕೆ ಬಂದು 50 ವರ್ಷ ತುಂಬಿತ್ತು. ಇತ್ತೀಚೆಗೆ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರು. 14 ಚುನಾವಣೆಯಲ್ಲಿ ಸ್ಪರ್ಧೆ.. 11 ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಆರು ಬಾರಿ ಲೋಕಸಭೆಗೆ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಾಮರಾಜನಗರದಿಂದ(Chamarajanagar) ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ನಂಜನಗೂಡು ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇವರು ಬೆಂಗಳೂರಿನ(Bengaluru) ಮಣಿಪಾಲ್ ಆಸ್ಪತ್ರೆಯಲ್ಲಿ ರಾತ್ರಿ 1.20ಕ್ಕೆ ಕೊನೆಯುಸಿರೆಳೆದಿದ್ದಾರೆ. ಮೂತ್ರಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 3 ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ರಾತ್ರಿ ಶ್ರೀನಿವಾಸ್ ಪ್ರಸಾದ್ ನಿಧನ ಹೊಂದಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಇಂದು ಸಂಗಾತಿಯಿಂದ ದೂರವಾಗುತ್ತಾರೆ..ಖಿನ್ನತೆಯಿಂದ ಬಳಲುವಿರಿ

Video Top Stories