Asianet Suvarna News Asianet Suvarna News

ಬಸ್‌ ನಿಲ್ದಾಣ ಕಟ್ಟಡದಲ್ಲಿ ಬಾರ್ & ರೆಸ್ಟೋರೆಂಟ್‌ ಪ್ರಕರಣ: ಕ್ರಮಕ್ಕೆ ಬಿಎಂಟಿಸಿ ಎಂಡಿಗೆ ಸಾರಿಗೆ ಸಚಿವರ ಸೂಚನೆ

ಬಿಎಂಟಿಸಿ ಬಸ್‌ ನಿಲ್ದಾಣದ ನಾಲ್ಕನೇ ಮಹಡಿಯಲ್ಲಿ ಬಾರ್‌ & ರೆಸ್ಟೋರೆಂಟ್‌ ನಡೆಸಲಾಗುತ್ತಿದೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿ ಮಾಡಿತ್ತು. ಈ ವರದಿ ಬೆನ್ನಲೇ ಎಚ್ಚೆತ್ತಿರುವ ಸಾರಿಗೆ ಸಚಿವರು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
 

ಬೆಂಗಳೂರು: ಬಿಎಂಟಿಸಿ ಬಸ್‌ ನಿಲ್ದಾಣ ಕಟ್ಟಡದಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ಗೆ ಅವಕಾಶ ನೀಡಿರುವ ಬಗ್ಗೆ ಶುಕ್ರವಾರ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಟೆಂಡರ್‌ನನ್ನು 12 ವರ್ಷಕ್ಕೆ ಬಿಜೆಪಿ ಅವಧಿಯಲ್ಲಿ ನೀಡಲಾಗಿದೆ. ಅಲ್ಲದೇ ತನಿಖೆ ಮಾಡುವಂತೆ ಬಿಎಂಟಿಸಿ ಎಂಡಿಗೆ ಆದೇಶ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಬಿಟಿಎಂ ಲೇಔಟ್‌ನ ಕುವೆಂಪುನಗರದ ಬಸ್‌ ನಿಲ್ದಾಣದ ನಾಲ್ಕನೇ ಮಹಡಿಯಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ ನಡೆಸಲಾಗುತ್ತಿತ್ತು.  80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ನಿಲ್ದಾಣವನ್ನು ಕಳೆದ ವರ್ಷ ಲೋಕಾರ್ಪಣೆ ಮಾಡಲಾಗಿತ್ತು. 

ಇದನ್ನೂ ವೀಕ್ಷಿಸಿ: ಬಸ್‌ ನಿಲ್ದಾಣ ಕಟ್ಟಡದಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌: ನಿಯಮಗಳನ್ನು ಗಾಳಿಗೆ ತೂರಿದ್ರಾ ಅಧಿಕಾರಿಗಳು ?

Video Top Stories