ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಾಲೀಮು: ಕನಿಷ್ಠ 20 ಸೀಟ್‌ ಗೆಲ್ಲಲು ನಾಯಕರ ಕಸರತ್ತು

ಲೋಕಸಭೆ ಚುನಾವಣೆಗೆ ಭರ್ಜರಿ ತಾಲೀಮು ಆರಂಭಿಸಿರುವ ಕಾಂಗ್ರೆಸ್‌, ಪಕ್ಷದಲ್ಲಿ ಮಹತ್ವದ 'ಸರ್ಜರಿ' ಮಾಡಲು ಮುಂದಾಗಿದೆ. ಏನಿದು ಡಿಕೆಶಿ ಪ್ಲಾನ್ ಎಂಬುದರ ಮಾಹಿತಿ ಇಲ್ಲಿದೆ..
 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಭರ್ಜರಿ ತಾಲೀಮು ನಡೆಸಲಾಗುತ್ತಿದೆ. ಕನಿಷ್ಠ 20 ಸೀಟ್‌ ಗೆಲ್ಲಲು ಕಾಂಗ್ರೆಸ್ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೇ ಪಕ್ಷ ಸಂಘಟನೆ ಬಗ್ಗೆ ಕಾಂಗ್ರೆಸ್‌ನೊಳಗೆ ಗಂಭೀರ ಚರ್ಚೆ ನಡೆಯುತ್ತಿದೆ. ಐವರು ಕೆಪಿಸಿಸಿ ಕಾರ್ಯಾಧ್ಯಕ್ಷರ ಪೈಕಿ ಮೂವರು ಸಚಿವರಾಗಿದ್ದಾರೆ. ಹಾಗಾಗಿ ಅವರನ್ನು ಕೈ ಬಿಟ್ಟು ಬೇರೆಯವರಿಗೆ ಕಾರ್ಯಾಧ್ಯಕ್ಷ ಪಟ್ಟ ಕೊಡಲು ಕಾಂಗ್ರೆಸ್‌ ಚಿಂತನೆ ನಡೆಸಿದೆ ಎನ್ನಲಾಗ್ತಿದೆ. ಇಲ್ಲಿ ಚುನಾವಣೆಯಲ್ಲಿ ಸೋತವರಿಗೆ ಹಾಗೂ ಹಿರಿಯರಿಗೆ ಅವಕಾಶ ಕೊಡಲು ಕಾಂಗ್ರೆಸ್ ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮನ್ನ ಎಚ್ಚರ..ಎಚ್ಚರ: ಪ್ಲೇ ಸ್ಟೋರ್‌ಗೆ ಲಗ್ಗೆ ಇಟ್ಟಿವೆ ನಕಲಿ ಆ್ಯಪ್‌ಗಳು

Related Video