ವೇತನ ಸಿಗದೇ ಪರದಾಡುತ್ತಿದ್ದ ನೇಕಾರರು; ಸುವರ್ಣ ನ್ಯೂಸ್ ವರದಿಯಿಂದ ಕೈಗೆ ಬಂತು ವೇತನ!
ಕೊರೋನಾದಿಂದ ವೇತನವಿಲ್ಲದೇ ಸಂಕಷ್ಟದಲ್ಲಿದ್ದ ನೇಕಾರರ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಕಾರಜೋಳರು ವೇತನ ಸಿಗುವಂತೆ ಮಾಡಿದ್ದಾರೆ. ನಮ್ಮ ಸುವರ್ಣ ನ್ಯೂಸ್ ಇಂಪ್ಯಾಕ್ಟ್!
ಬೆಂಗಳೂರು (ಸೆ. 12): ಇವರೆಲ್ಲಾ ಇಡೀ ದೇಶವೇ ಹೆಮ್ಮೆ ಪಡುವಂತಹ ರಾಷ್ಟ್ರಧ್ವಜದ ಬಟ್ಟೆಯನ್ನ ನೇಯುವ ಕೆಲಸ ಮಾಡುತ್ತಿದ್ದರು. ಅವರಿಗೆ ವೇತನ ಕಡಿಮೆ ಇದ್ರೂ ಅಭಿಮಾನದಿಂದ ತಮ್ಮ ಕೆಲಸದಲ್ಲೇ ತೃಪ್ತಿ ಕಾಣುತ್ತಿದ್ದರು. ನೆಮ್ಮದಿಯ ಜೀವನ ನಡೆಸುತ್ತಿದ್ದರು.
ಲಿಮ್ಕಾ ಸಾಧನೆ ಮಾಡಿದ ಕಲಾ ಶಿಕ್ಷಕನಿಗೆ ಕೆಲಸವಿಲ್ಲದೇ ಪರದಾಟ..!
ಆದರೆ ಇವರ ಪಾಲಿಗೆ ಕೋರೋನಾ ಸಂಕಷ್ಟವನ್ನು ತಂದಿಟ್ಟಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ವೇತನ ಸಿಗದೇ ಪರದಾಡುತ್ತಿದ್ದರು. ಈ ಕುರಿತು ಸುವರ್ಣನ್ಯೂಸ್ ವರದಿ ಮಾಡಿದ್ದೇ ತಡ, ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಕಾರಜೋಳ ಇದೀಗ ನೇಕಾರ ಕುಟುಂಬಗಳಿಗೆ ವೇತನ ಒದಗುವಂತೆ ಮಾಡಿದ್ದು, ಆ ಕುಟುಂಬಗಳು ನೆಮ್ಮದಿಪಡುವಂತಾಗಿದೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್!