Asianet Suvarna News Asianet Suvarna News

ಲಿಮ್ಕಾ ಸಾಧನೆ ಮಾಡಿದ ಕಲಾ ಶಿಕ್ಷಕನಿಗೆ ಕೆಲಸವಿಲ್ಲದೇ ಪರದಾಟ..!

ಈ ಶಿಕ್ಷಕ ಕೈಯಲ್ಲಿ ಕುಂಚ ಹಿಡಿದರೆ ಅರಳೋದು ಅದ್ಭುತ ಚಿತ್ರಕಲೆ. ಅತಿ ಸೂಕ್ಷ್ಮ ಸೃಜನಾತ್ಮಕ ಚಿತ್ರಗಳನ್ನು ಬಿಡಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಬಾದವಾಡಿ ಗ್ರಾಮದ ಕಲಾ ಶಿಕ್ಷಕ ವಿಜಯ್. 

ಬಾಗಲಕೋಟೆ (ಸೆ. 10): ಈ ಶಿಕ್ಷಕ ಕೈಯಲ್ಲಿ ಕುಂಚ ಹಿಡಿದರೆ ಅರಳೋದು ಅದ್ಭುತ ಚಿತ್ರಕಲೆ. ಅತಿ ಸೂಕ್ಷ್ಮ ಸೃಜನಾತ್ಮಕ ಚಿತ್ರಗಳನ್ನು ಬಿಡಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಬಾದವಾಡಿ ಗ್ರಾಮದ ಕಲಾ ಶಿಕ್ಷಕ ವಿಜಯ್. 

ಇವರಿಗೆ ಬಾಲ್ಯದಿಂದಲೇ ಚಿತ್ರಕಲೆ ಬಿಡಿಸೋ ಹವ್ಯಾಸ. ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ವಿಜಯ್, ಇದರಲ್ಲೇ ಸ್ನಾತಕೋತ್ತರ ಪದವಿಯನ್ನ ಪಡೆದುಕೊಂಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗ ಕವಿಗಳ ಚಿತ್ರಗಳನ್ನು ಅತಿ ಸೂಕ್ಷ್ಮ ಚಿತ್ರಕಲೆಯ ಮೂಲಕ ಪ್ರದರ್ಶನ ಮಾಡಿ ಲಿಮ್ಕಾ ಸಾಧನೆ ಮಾಡಿದ್ದಾರೆ. ಇದೀಗ ಇವರಿಗೆ ಕೊರೋನಾ ಸಂಕಷ್ಟದಿಂದಾಗಿ ಕೆಲಸ ಇಲ್ಲದಂತಾಗಿದೆ.  ವಿಜಯ್ ಅವರ ಸಾಧನೆಗಳೇನು? ಇದೀಗ ಅವರು ಎದುರಿಸುತ್ತಿರುವ ಸವಾಲುಗಳೇನು? ಅವರು ಕೇಳುತ್ತಿರುವ ನೆರವಾದರೂ ಏನು? ಇಲ್ಲಿದೆ ಒಂದು ವರದಿ..!