Asianet Suvarna News Asianet Suvarna News

ದಾರಿ ತಪ್ಪಿ ಬಂದ ಪುಟ್ಟ ಆನೆ ಮರಿಯ ಆಕ್ರಂದನ..! ಅಮ್ಮನಿಗಾಗಿ ಅಳು

ತಾಯಿ ತೆಕ್ಕೆಯಿಂದ ದೂರಾದ ಪುಟ್ಟ ಆನೆ ಮರಿಯನ್ನ ಗ್ರಾಮಸ್ಥರು ರಕ್ಷಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಆನೆ ಮರಿಯ ಆಕ್ರಂದನ ಕಂಡು ಹಳ್ಳಿಗರು ಮರುಗಿದ ಘಟನೆ ಹುಣಸೂರು ತಾಲೂಕಿನ ಭರತವಾಡಿಯಲ್ಲಿ ನಡೆದಿದೆ.

ಮೈಸೂರು(ಫೆ.06): ತಾಯಿ ತೆಕ್ಕೆಯಿಂದ ದೂರಾದ ಪುಟ್ಟ ಆನೆ ಮರಿಯನ್ನ ಗ್ರಾಮಸ್ಥರು ರಕ್ಷಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಆನೆ ಮರಿಯ ಆಕ್ರಂದನ ಕಂಡು ಹಳ್ಳಿಗರು ಮರುಗಿದ ಘಟನೆ ಹುಣಸೂರು ತಾಲೂಕಿನ ಭರತವಾಡಿಯಲ್ಲಿ ನಡೆದಿದೆ.

ತಾಯಿಯಿಂದ ತಪ್ಪಿಸಿಕೊಂಡಿರುವ ಆನೆ ಮರಿ ಕಾಡಿನಿಂದ ನಾಡಿನತ್ತ ಬಂದಿತ್ತು. ಚೀರಲು ಧ್ವನಿಯಲ್ಲಿ ಕೂಗಾಡುತ್ತಿದ್ದ ಮರಿ ಗಮನಿಸಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಆನೆ ಮರಿಯನ್ನು ರಕ್ಷಿಸಿದ್ದಾರೆ.

ಮರಿಯಾನೆ ಜತೆ ಸೆಲ್ಫಿಗೆ ಮುಗಿಬಿದ್ದ ಜನತೆ!

ಪ್ರಾಥಮಿಕ ಆರೈಕೆ ನಂತರ ಆನೆಮರಿಯನ್ನು ತಾಯಿ ಮಡಿಲಿಗೆ ಸೇರಿಸಲು ಪ್ರಯತ್ನಿಸಿದ್ದು, ಒಂದು ವೇಳೆ ತಾಯಿ ಆನೆ ಸಿಗದಿದ್ದರೆ ಆನೆ ಶಿಬಿರಕ್ಕೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.