ಆನೇಕಲ್‌[ಜ.28]: ಹಿಂಡಿನಿಂದ ಬೇರ್ಪಟ್ಟಮರಿಯಾನೆಯೊಂದು ತಮಿಳುನಾಡಿನ ಶ್ಯಾನಮಾವು ಬಳಿಯ ಕೆರೆಯಂಗಳದಲ್ಲಿ ಸೋಮವಾರ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಜನ ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

ಸುಮಾರು ಎರಡು ವರ್ಷದ ಆನೆ ಮರಿಯೊಂದು ಕೆರೆ ಅಂಗಳದಲ್ಲಿ ಓಡಾಡಿಕೊಂಡು ನೀರನ್ನು ತನ್ನ ಮೈಮೇಲೆ ಹಾಕಿಕೊಳ್ಳುತ್ತಾ, ಆಟವಾಡುತ್ತಿತ್ತು. ಈ ಮನಮೋಹಕ ದೃಶ್ಯವನ್ನು ಕಂಡ ಗ್ರಾಮಸ್ಥರು ಆನೆ ಮರಿಯ ಸಮೀಪಕ್ಕೆ ಹೋಗಲು ಯತ್ನಿಸಿದ್ದಾರೆ. ಸ್ವಲ್ಪ ವಿಚಲಿತವಾದ ಆನೆ ಮರಿ ಅತ್ತ-ಇತ್ತ ಓಡಲು ಶುರು ಮಾಡಿತು.

ಜಂಟಲ್‌ಮನ್ ಆನೆಗಳಿಗೆ ದಾರಿ ಬಿಡುವುದು ಮನುಷ್ಯನ ಕರ್ತವ್ಯ: ಸುಪ್ರೀಂಕೋರ್ಟ್!

ಕೂಡಲೇ ಅರಣ್ಯ ಇಲಾಖೆಗೆ ಕರೆ ಮಾಡಿದ ಸ್ಥಳೀಯರು ಆನೆ ಮರಿ ರಕ್ಷಿಸುವಂತೆ ತಿಳಿಸಿದ್ದಾರೆ. ಆದರೆ ಸಂಜೆಯಾದರೂ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದತ್ತ ಸುಳಿಯಲಿಲ್ಲ ಎಂದು ತಿಳಿದುಬಂದಿದೆ.