ಪ್ರೀತಿಸಿ ಪರಾರಿಯಾದ ಪ್ರೇಮಿಗಳು..ಯುವಕನ ಪೋಷಕರಿಗೆ ಥಳಿತ !

ಪ್ರೇಮಿಗಳ ಪ್ರೀತಿಗೆ ಹುಡುಗಿ ಮನೆಯ ಪೋಷಕರ ವಿರೋಧವಿದ್ದ ಹಿನ್ನೆಲೆ ಇಬ್ಬರು ಓಡಿ ಹೋಗಿದ್ದಾರೆ. ಇದನ್ನು ಅರಿತ ಹುಡುಗಿ ಮನೆಯವರು ಹುಡುಗನ ಪೋಷಕರಿಗೆ ಥಳಿಸಿದ್ದಾರೆ.

Share this Video
  • FB
  • Linkdin
  • Whatsapp

ಪ್ರೀತಿಸಿ ಪರಾರಿಯಾಗಿದ್ದ ಪ್ರೇಮಿಯ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ನಡೆದಿದೆ. ಪ್ರೇಮಿಯ ತಂದೆ-ತಾಯಿಯ ಮೇಲೆ ನಡು ರಸ್ತೆಯಲ್ಲಿಯೇ ಮನಸೋ ಇಚ್ಛೆ ಹಲ್ಲೆ(Attack) ಮಾಡಲಾಗಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸೋಮವಾರ ಮನೋಜ್ ಹಾಗೂ ಅಂಕಿತಾ ಪರಾರಿಯಾಗಿದ್ರು. ಅಂಕಿತಾ ಪೋಷಕರಿಂದ ಇವರ ಪ್ರೀತಿಗೆ(Love) ವಿರೋಧ ಇತ್ತಂತೆ. ಹೀಗಾಗಿ ಅಂಕಿತಾ ಪೋಷಕರಾದ ಶ್ರೀನಿವಾಸ್ ಸೇರಿದಂತೆ ಕುಟುಂಬ ಸದಸ್ಯರಿಂದ ಮನೋಜ್ ಕುಮಾರ್ ತಂದೆ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ವೆಂಕಟಲಕ್ಷ್ಮಮ್ಮ ಹಾಗೂ ಗಂಗರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು, ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ವೀಕ್ಷಿಸಿ: 338ರೂ.ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪ: ಸಮೀರ್ ಮಹೇಂದ್ರು ಹೇಳಿಕೆ ಸಾಕ್ಷ್ಯ ಆಧರಿಸಿ ಕೇಜ್ರಿವಾಲ್‌ಗೆ ಇಡಿ ಸಮನ್ಸ್..!

Related Video