338ರೂ.ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪ: ಸಮೀರ್ ಮಹೇಂದ್ರು ಹೇಳಿಕೆ ಸಾಕ್ಷ್ಯ ಆಧರಿಸಿ ಕೇಜ್ರಿವಾಲ್‌ಗೆ ಇಡಿ ಸಮನ್ಸ್..!
ಮದ್ಯ ನೀತಿ ಹಗರಣದಲ್ಲಿ 2ನೇ ಬಾರಿಗೆ ದೆಹಲಿ ಸಿಎಂಗೆ ಸಮನ್ಸ್
ಇಂದು ವಿಚಾರಣೆಗೆ ಹಾಜರಾಗಲು ದೆಹಲಿ ಸಿಎಂಗೆ ಇ.ಡಿ ಸಮನ್ಸ್
ಮದ್ಯ ನೀತಿ ಕೇಸ್ನಲ್ಲಿ ಹಣ ವರ್ಗಾವಣೆ ಆರೋಪದಡಿ ಬುಲಾವ್
ದೆಹಲಿ ಮದ್ಯ ನೀತಿ ಹಗರಣದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಗೆ ಇ.ಡಿ(ED) ಮತ್ತೆ ಶಾಕ್ ಕೊಟ್ಟಿದೆ. ಡಿಸೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್(Summons) ನೀಡಿದೆ.338 ಕೋಟಿ ಅಕ್ರಮವಾಗಿ ಹಣ ವರ್ಗಾವಣೆ(Money laundering case) ಮಾಡಿದ ಆರೋಪ ಕೇಳಿಬಂದಿದ್ದು, ಸಮೀರ್ ಮಹೇಂದ್ರು ಹೇಳಿಕೆಯ ಸಾಕ್ಷ್ಯ ಆಧರಿಸಿ ಇ.ಡಿ ವಿಚಾರಣೆಗೆ ಕರೆದಿದೆ. ನವೆಂಬರ್ 2ರಂದು ಮೊದಲ ಬಾರಿ ಕೇಜ್ರಿವಾಲ್‌ಗೆ ಸಮನ್ಸ್ ನೀಡಲಾಗಿತ್ತು. ಆದ್ರೆ ವಿನಾಯತಿ ಕೋರಿ ದೆಹಲಿ ಸಿಎಂ ವಿಚಾರಣೆಗೆ ಹೋಗಿರಲಿಲ್ಲ. ಈಗ ಮತ್ತೆ ಕರೆದಿದ್ದು ವಿಚಾರಣೆಗೆ ಹಾಜರಾಗ್ತಾರಾ ಇಲ್ವಾ ಕಾದುನೋಡಬೇಕು. ಪಿಎಂಎಲ್ಎ ಆ್ಯಕ್ಟ್ ಅಡಿಯಲ್ಲಿ ಕೇಜ್ರಿವಾಲ್ ಇ.ಡಿ ಸಮನ್ಸ್ ನೀಡಿದ್ದು, ನವೆಂಬರ್ 2 ರಂದೇ ವಿಚಾರಣೆಗೆ ಕರೆದಿತ್ತು.
ಇದನ್ನೂ ವೀಕ್ಷಿಸಿ: ಪ್ರಲ್ಹಾದ್ ಜೋಶಿ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗ? ಪ್ರದೀಪ್ ಶೆಟ್ಟರ್ ಹೇಳಿಕೆ ಹಿಂದಿದ್ಯಾ ಹೊಸ ಗೇಮ್ ಪ್ಲಾನ್?