ಟಾಪ್‌ 15 ನ್ಯೂಸ್‌ ವೆಬ್‌ನಲ್ಲಿ ಏಷ್ಯಾನೆಟ್‌ ನ್ಯೂಸ್‌ ನಂ.1: ವಾರ್ಷಿಗ ಓದುಗರ ಸಂಖ್ಯೆಯಲ್ಲಿ ಶೇ.110ರಷ್ಟು ಪ್ರಗತಿ

ಪ್ರಾದೇಶಿಕ ಡಿಜಿಟಲ್ ನ್ಯೂಸ್‌ನಿಂದ ರಾಷ್ಟ್ರೀಯ ಡಿಜಿಟಲ್ ನ್ಯೂಸ್‌ಗೆ ಲಗ್ಗೆ
ಏಷ್ಯಾನೆಕ್ಸ್ಟ್ ಟೆಕ್ನಾಲಜೀಸ್ ಸಿಒಒ ಸಮರ್ಥ್ ಶರ್ಮಾ ಹೆಮ್ಮೆಯ ನುಡಿ
ಬೆಳವಣಿಗೆಯಲ್ಲಿ ವರ್ಷದಿಂದ ವರ್ಷಕ್ಕೆ ಅಸಾಧಾರಣ ಸಾಧನೆಗೆ ಕೈಗನ್ನಡಿ

First Published May 24, 2024, 6:04 PM IST | Last Updated May 24, 2024, 6:04 PM IST

ನೇರ, ದಿಟ್ಟ, ನಿರಂತರ ಸುದ್ದಿ ಮೂಲಕ ಜನರ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ಏಷ್ಯಾನೆಟ್ ನ್ಯೂಸ್ ಡಿಜಿಟಲ್(Asianet News Digital) ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ನಿರ್ಮಿಸಿದೆ. ದೇಶದ ಟಾಪ್ 15 ಡಿಜಿಟಲ್ ನ್ಯೂಸ್ ಪೈಕಿ ಏಷ್ಯಾನೆಟ್ ನ್ಯೂಸ್.ಕಾಂ ನಂಬರ್ 1 ಆಗಿ ಹೊರಹೊಮ್ಮಿದೆ. ವರ್ಷದಿಂದ ವರ್ಷಕ್ಕೆ  ಏಷ್ಯಾನೆಟ್ ನ್ಯೂಸ್ ಡಿಜಿಟಲ್ ಶೇ.110ರಷ್ಟು ಪ್ರಗತಿ ಕಂಡಿದೆ. ಕಾಮ್‌ಸ್ಕೋರ್ ವರದಿಯಲ್ಲಿ(ComScore Report) ಏಷ್ಯಾನೆಟ್ ನ್ಯೂಸ್ ಕಾಂ 2024ರ ಆರ್ಥಿಕ ವರ್ಷದಲ್ಲಿ ಶೇಕಡಾ 110ರಷ್ಟು ಓದುಗರ ಪ್ರಗತಿ ಸಾಧಿಸಿದೆ. ಈ ಮೂಲಕ ದೇಶದ ಟಾಪ್ 15 ರಾಷ್ಟ್ರೀಯ ಡಿಜಿಟಲ್ ನ್ಯೂಸ್‌ನಲ್ಲಿ ಏಷ್ಯಾನೆಟ್ ನ್ಯೂಸ್ ಕಾಂ(Asianet News Com) ಮೊದಲ ಸ್ಥಾನ ಪಡೆದುಕೊಂಡಿದೆ. ಈ ಸಾಧನೆಯಿಂದ ಏಷ್ಯಾನೆಟ್ ನ್ಯೂಸ್.ಕಾಂ ದೇಶದ ಮುಂಚೂಣಿಯ ಡಿಜಿಟಲ್ ನ್ಯೂಸ್ ಪಬ್ಲೀಶರ್ ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಪ್ರಬಲ ಪ್ರಾದೇಶಿಕ ಡಿಜಿಟಲ್ ನ್ಯೂಸ್‌ನಿಂದ ಇದೀಗ ಪ್ರಮುಖ ರಾಷ್ಟ್ರೀಯ ಡಿಜಿಟಲ್ ನ್ಯೂಸ್‌ನತ್ತ ದಾಪುಗಾಲು ಇಟ್ಟಿದ್ದೇವೆ ಎಂದಿದ್ದಾರೆ ಏಷ್ಯಾನೆಕ್ಸ್ ಟೆಕ್ನಾಲಜೀಸ್ ಸಿಒಒ ಸಮರ್ಥ್ ಶರ್ಮಾ. ನಮ್ಮ ಡಿಜಿಟಲ್ ವ್ಯವಹಾರದಲ್ಲಿ ಮತ್ತೊಂದು ವರ್ಷವನ್ನು ನಾವು ಯಶಸ್ಸಿಯಾಗಿಸಿದ್ದೇವೆ. ಇದು ನಮ್ಮ ಅಚಲ ಬದ್ಧತೆಯ ಸಾಕ್ಷಿ ಎಂದು   ಏಷ್ಯಾನೆಕ್ಸ್ ಟೆಕ್ನಾಲಜೀಸ್ ಸಿಇಒ ನೀರಜ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಬೆಂಗಳೂರಲ್ಲಿ ಬರ್ತ್ ಡೇ ಹೆಸರಲ್ಲಿ ರೇವ್ ಪಾರ್ಟಿ : ಬ್ಲಡ್‌ ರಿಪೋರ್ಟ್ ಕಾರ್ಡ್‌ ಹೇಳಿದ ಅಸಲಿ ಕಥೆ ಏನು?

Video Top Stories