Asianet Suvarna News Asianet Suvarna News

ಬೆಂಗಳೂರಲ್ಲಿ ಬರ್ತ್ ಡೇ ಹೆಸರಲ್ಲಿ ರೇವ್ ಪಾರ್ಟಿ : ಬ್ಲಡ್‌ ರಿಪೋರ್ಟ್ ಕಾರ್ಡ್‌ ಹೇಳಿದ ಅಸಲಿ ಕಥೆ ಏನು?

ಸಿಸಿಬಿ ದಾಳಿ ವೇಳೆ ನಾನೊಬ್ಬ ಸಿನಿಮಾ ನಟಿ , ನನ್ನನ್ನೇ ಪ್ರಶ್ನೆ ಮಾಡ್ತೀರಾ ಅಂತ ಸಿಸಿಬಿ ಮುಂದೆ ನಟಿ ಹೇಮಾ ಹೇಳಿದ್ದರಂತೆ.
 

ಬೆಂಗಳೂರಿನ ಹೊರವಲಯದ ಫಾರ್ಮ್‌ ಹೌಸ್‌ನಲ್ಲಿ ಬರ್ತ್ ಡೇ(Birthday) ಹೆಸರಿನಲ್ಲಿ ರೇವ್ ಪಾರ್ಟಿಯೊಂದು(Rave Party) ನಡೆದಿದೆ. ಈ ವೇಳೆ ಸಿಸಿಬಿ(CCB) ಕೈಯಲ್ಲಿ ಕೆಲವರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ಭಾನುವಾರ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಪಾರ್ಟಿಯಲ್ಲಿದ್ದ ಇಬ್ಬರು ನಟಿಯರು ಸೇರಿದಂತೆ 100ಕ್ಕೂ ಹೆಚ್ಚಿನ ಮಂದಿಯನ್ನು ಸಿಸಿಬಿ ವೈದ್ಯಕೀಯ ತಪಾಸಣೆಗೊಳಪಡಿಸಿತ್ತು. ಈಗ ವೈದ್ಯಕೀಯ ವರದಿ ಸಿಸಿಬಿಗೆ ಸಲ್ಲಿಕೆಯಾಗಿದ್ದು, ಇದರಲ್ಲಿ 101 ಮಂದಿ ಪೈಕಿ 86 ಜನರು ಮಾದಕ ವಸ್ತು ಸೇವನೆ ಖಚಿತವಾಗಿದೆ ಎಂದು ಗೊತ್ತಾಗಿದೆ. 

ಇದನ್ನೂ ವೀಕ್ಷಿಸಿ:  ಜೂನ್ 4ರ ನಂತರ ಕಾಂಗ್ರೆಸ್‌ನಲ್ಲಿ ಬದಲಾವಣೆ ಆಗುತ್ತಾ? ಡಿಕೆಶಿಯ ಈ ಮಾತಿನಲ್ಲೂ ಇದೆಯಾ ಸಂದೇಶ..?