ದಾವಣಗೆರೆಯ ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರ ಭೇಟಿ..ಅವ್ಯವಸ್ಥೆ ಕಂಡು ತ್ರೀವ ಆಕ್ರೋಶ
ದಾವಣಗೆರೆ ನಗರದ ಆಜಾದ್ ನಗರ ಮುದ್ದಾ ಭೋವಿ ಕಾಲೋನಿ ಹಾಗೂ ಬೇತೂರ ರಸ್ತೆ ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರು ಭೇಟಿ ನೀಡಿದರು.
ದಾವಣಗೆರೆ: ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರಾದ(Judge) ಮಹಾವೀರ ಕರೆಣ್ಣವರ ದಿಢೀರ್ ಭೇಟಿ, ಪರಿಶೀಲಿಸಿದರು. ಅಂಗನವಾಡಿ ಕೇಂದ್ರದಲ್ಲಿನ (Anganwadi Centers) ಅವ್ಯವಸ್ಥೆ ಕಂಡು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ದಾವಣಗೆರೆ (Davanagere)ನಗರದ ಆಜಾದ್ ನಗರ ಮುದ್ದಾ ಭೋವಿ ಕಾಲೋನಿ ಹಾಗೂ ಬೇತೂರ ರಸ್ತೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು. ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಮೂರ್ತಿ ಮಹಾವೀರ ಕರೆಣ್ಣವರ ಭೇಟಿ ನೀಡಿದ್ದಾರೆ. ಬಹುತೇಕ ಅಂಗನವಾಡಿಗಳಿಗೆ ಶೌಚಾಲಯಗಳೇ ಇಲ್ಲ. ಮಕ್ಕಳು ಕುಳಿತುಕೊಳ್ಳುಲು ಸ್ಥಳವಿಲ್ಲ. ಉತ್ತಮ ಪೂರಕ ಪೌಷ್ಟಿಕ ಆಹಾರ ಪೂರೈಕೆ ಆಗಿಲ್ಲ. ಮಕ್ಕಳ ಆಟಿಕೆ ಸಾಮಾನು ಗಂಟು ಮೂಟೆ ಕಟ್ಟಿಡಲಾಗಿದೆ. ಸಿಡಿಪಿಓ ಹಾಗೂ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ಮಾಡಿಲ್ಲ. ಸರ್ಕಾರ ಅಂಗನವಾಡಿಗಳಿಗೆ ಸರ್ಕಾರಿ ಶಾಲೆಗಳಂತೆ ಮೂಲ ಭೂತ ಸೌಲಭ್ಯ ಒದಗಿಸಬೇಕು ಎಂದು ಅವರು ಹೇಳಿದರು.
ಇದನ್ನೂ ವೀಕ್ಷಿಸಿ: ಏನಿದು ಆದೇಶ? ಕೆರಳಿದ್ದೇಕೆ ಕಾಂಗ್ರೆಸ್? ಭೇಷ್ ಅಂದಿದ್ದೇಕೆ RSS? 58 ವರ್ಷಗಳ ಹಿಂದಿನ ಆದೇಶ ಹಿಂಪಡೆದದ್ದೇಕೆ ಕೇಂದ್ರ ?