ಏನಿದು ಆದೇಶ? ಕೆರಳಿದ್ದೇಕೆ ಕಾಂಗ್ರೆಸ್? ಭೇಷ್ ಅಂದಿದ್ದೇಕೆ RSS? 58 ವರ್ಷಗಳ ಹಿಂದಿನ ಆದೇಶ ಹಿಂಪಡೆದದ್ದೇಕೆ ಕೇಂದ್ರ ?
ಆರೆಸ್ಸೆಸ್ ಓಲೈಸಲು ಮೋದಿ ಸರ್ಕಾರದಿಂದ ಈ ನಿರ್ಧಾರವೆಂದ ಕಾಂಗ್ರೆಸ್..!
ಇಂದಿರಾ ಹೊರಡಿಸಿದ್ದ ಆದೇಶ ದೇಶದಲ್ಲಿ ಕಡ್ಡಾಯವಾಗಿ ಜಾರಿಯಾಗಿತ್ತಾ..?
58 ವರ್ಷಗಳಲ್ಲಿ ಸರ್ಕಾರಿ ನೌಕರರು ಆರ್‌ಎಸ್‌ಎಸ್‌ನಿಂದ ದೂರ ಉಳಿದಿದ್ರಾ..?
ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಹೊರಡಿಸಿದ್ದ ಆದೇಶವನ್ನು ಪ್ರಧಾನಿ ಮೋದಿ(Narendra Modi)ರದ್ದು ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಯ(BJP) ಮೂಲ ಬೇರು. ಬಿಜೆಪಿಯ ಅಸಲಿ ಶಕ್ತಿ. ದೇಶದಲ್ಲಿ ಕೇಸರಿ ಪಕ್ಷಕ್ಕೆ ಶಕ್ತಿ ಕೊಟ್ಟು ದೇಶದ ಅಧಿಕಾರ ಗದ್ದುಗೆ ಹಿಡಿಯುವಂತೆ ಮಾಡಿದ ಶಕ್ತಿ ಆರ್‌ಎಸ್‌ಎಸ್ (RSS). ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರೀತಿಸುವವರೂ ಇದ್ದಾರೆ, ದ್ವೇಷಿಸುವವರೂ ಇದ್ದಾರೆ. ಅದು ಅವರವರ ಸಿದ್ಧಾಂತದ ಕಾರಣಗಳಿಗೆ. ಇದ್ರಲ್ಲಿ ಸರ್ಕಾರಿ ನೌಕರರೂ ಸೇರ್ತಾರೆ. ಆರ್‌ಎಸ್‌ಎಸ್ ಅಂದ್ರೆ ಒಂದು ಸಂಘಟನೆ. ರಾಷ್ಟ್ರೀಯತೆಯನ್ನೇ ಅಸ್ಮಿತೆ ಮಾಡಿಕೊಂಡಿರೋ ಪ್ರಬಲ ಒಂದು ಶಕ್ತಿಶಾಲಿ ಪಡೆ ಆರ್‌ಎಸ್‌ಎಸ್. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ದೇಶಾದ್ಯಂತ ಕೋಟ್ಯಂತರ ಕಾರ್ಯಕರ್ತರಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರಿಗೆ, ಬಂಗಾಳದಿಂದ ಮಹಾರಾಷ್ಟ್ರದವರೆಗೆ. ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಹೀಗೆ ದೇಶದ ನಾಲ್ಕೂ ದಿಕ್ಕುಗಳಲ್ಲಿ ಕಾರ್ಯಕರ್ತರ ಪಡೆಯನ್ನು ಹೊಂದಿರೋ ಸಂಘಟನೆ ಆರ್‌ಎಸ್‌ಎಸ್. ಇಂಥಾ ಆರೆಸ್ಸೆಸ್ ಬಗ್ಗೆ ಪರ-ವಿರೋಧ ಚರ್ಚೆಗಳು ಇವತ್ತು ನಿನ್ನೆಯದ್ದಲ್ಲ. ನೆಹರೂ ಕಾಲದಿಂದ ರಾಹುಲ್ ಗಾಂಧಿ(Rahul Gandhi) ಕಾಲದವರೆಗೆ ಕಾಂಗ್ರೆಸ್ಸಿಗರು ಆರ್‌ಎಸ್‌ಎಸ್‌ನನ್ನು ವಿರೋಧಿಸಿಕೊಂಡು ಬಂದಿದ್ರೆ, ಆರ್‌ಎಸ್‌ಎಸ್ ಪರವಾಗಿ ಗಟ್ಟಿಧ್ವನಿಯಲ್ಲಿ ಮಾತಾಡ್ತಾ ಬಂದಿರೋದು ಬಿಜೆಪಿ.
ಇದನ್ನೂ ವೀಕ್ಷಿಸಿ: ಈಗ ಹೇಗಿದೆಯಂತೆ ದರ್ಶನ್ ಆರೋಗ್ಯ..? ಕೋರ್ಟ್ ಅಂಗಳದಲ್ಲಿ ಹೇಗಿತ್ತು ವಾದ-ಪ್ರತಿವಾದ..?