ಶರಿಯಾದಲ್ಲಿ ನಂಬಿಕೆ ಇದ್ದರೆ, ಮುಸ್ಲಿಮರು ನಮ್ಮ ಡಾಕ್ಟರ್ ಬಳಿ ಬರಬಾರದು: ಅನಂತಕುಮಾರ್ ಹೆಗಡೆ
ಮುಸ್ಲಿಂ ಸಮುದಾಯದ ವಿರುದ್ಧ ಮತ್ತೆ ಸಿಡಿದೆದ್ದ ಅನಂತಕುಮಾರ್ ಹೆಗಡೆ
‘ದುಡಿಯಲಿಕ್ಕೆ, ಟ್ಯಾಕ್ಸ್ ಕಟ್ಟಲಿಕ್ಕೆ ನಾವು ಬೇಕು.. ಸಿವಿಲ್ ಕೋಡ್ ಬೇಡ’
ದೇಗುಲ,ಮಠ,ಮಂದಿರಕ್ಕೆ ಗೌರವ ಕೊಡುವುದನ್ನು ಕಲಿಯಿರಿ ಎಂದ ಹೆಗಡೆ
ಮುಸ್ಲಿಂ ಸಮುದಾಯದ (Muslim community) ವಿರುದ್ಧ ಮತ್ತೆ ಅನಂತಕುಮಾರ್ ಹೆಗಡೆ(Ananthakumar Hegade) ಸಿಡಿದೆದಿದ್ದಾರೆ. ದುಡಿಯಲಿಕ್ಕೆ, ಟ್ಯಾಕ್ಸ್ ಕಟ್ಟಲಿಕ್ಕೆ ನಾವು ಬೇಕು.. ಸಿವಿಲ್ ಕೋಡ್ ಬೇಡ. ನಾವು ನೀಡಿದ ಸಂವಿಧಾನದ ಸಮಾನತೆ ಬೇಕು. ಶರಿಯಾ ಕಾನೂನು(Sharia law) ಬೇಕು, ಆದ್ರೆ ಸಂವಿಧಾನದಲ್ಲಿ ತಿದ್ದುಪಡಿ ಬೇಡ. ಶರಿಯಾದಲ್ಲಿನ ಶಿಕ್ಷೆ ಬೇಡ, ಅದು ಮಾತ್ರ ನಮ್ಮ ಸಂವಿಧಾನದಂತಿರಬೇಕು. ಶರಿಯಾದಲ್ಲಿ ಸಬ್ಸಿಡಿ ತೆಗೆದುಕೊಳ್ಳೋದೆ ಇಲ್ಲ, ಹಾಗಾದ್ರೆ ಸಬ್ಸಿಡಿ ಬಿಟ್ಟುಬಿಡಿ. ಶರಿಯಾದಲ್ಲಿ ನಂಬಿಕೆ ಇದ್ದರೆ ಮುಸ್ಲಿಮರು(Muslims) ನಮ್ಮ ಡಾಕ್ಟರ್ ಬಳಿ ಬರಬಾರದು. ನಮ್ಮ ಆಸ್ಪತ್ರೆಗೆ ಬರಬೇಡಿ, ಯುನಾನಿ ಆಸ್ಪತ್ರೆಗೆ ಹೋಗಿ ಎಂದು ಹೆಗಡೆ ಹೇಳಿದ್ದಾರೆ. ದೇಗುಲ, ಮಠ, ಮಂದಿರಕ್ಕೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಅವರು ಕಿವಿ ಮಾತು ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: Ananthakumar Hegade: ನನ್ನ ಮೇಲೆ ಕೇಸ್ ಹಾಕೋಕೆ ನಿಮಗೆಷ್ಟು ತಾಕತ್ ಇದೆ ಹಾಕಿ: ಅನಂತಕುಮಾರ್ ಹೆಗಡೆ