Ananthakumar Hegade: ನನ್ನ ಮೇಲೆ ಕೇಸ್ ಹಾಕೋಕೆ ನಿಮಗೆಷ್ಟು ತಾಕತ್ ಇದೆ ಹಾಕಿ: ಅನಂತಕುಮಾರ್ ಹೆಗಡೆ

ಪಾಪದವರ ಮೇಲೆ ಕೇಸ್ ಹಾಕಿದ್ರೆ ಅವರಿಗೆ ಹೇಳೋರು, ಕೇಳೋರು ಇರಲ್ಲ. ಈಗ ನನ್ನ ಮೇಲೆಯೇ ಕೇಸ್ ಹಾಕೋಕೆ ಶುರು ಮಾಡಿದ್ದಾರೆ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬಾಗಲಕೋಟೆ: ನನ್ನ ಮೇಲೆ ಕೇಸ್ ಹಾಕೋಕೆ ನಿಮಗೆಷ್ಟು ತಾಕತ್ ಇದೆ ಹಾಕಿ ಎಂದು ಹೇಳುವ ಮೂಲಕ ಅನಂತಕುಮಾರ್ ಹೆಗಡೆ(Ananthakumar Hegade) ಸಿಎಂ ಸಿದ್ದರಾಮಯ್ಯ(Siddaramaiah) ತಾಕತ್ ಪ್ರಶ್ನೆ ಮಾಡಿದ್ದಾರೆ. ಬಾಗಲಕೋಟೆಯ(Bagalkot) ಶಿರೋಳ ಗ್ರಾಮದಲ್ಲಿ ಹೆಗಡೆ ಈ ರೀತಿ ಹೇಳಿದ್ದಾರೆ. ಪಾಪದವರ ಮೇಲೆ ಕೇಸ್ ಹಾಕಿದ್ರೆ ಅವರಿಗೆ ಹೇಳೋರು, ಕೇಳೋರು ಇರಲ್ಲ. ಈಗ ನನ್ನ ಮೇಲೆಯೇ ಕೇಸ್(Case) ಹಾಕೋಕೆ ಶುರು ಮಾಡಿದ್ದಾರೆ. ಇಲ್ಲಿವರೆಗೆ ನೂರಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಹಿಂದೂ ಸಮಾಜ ವಿಷವನ್ನು ಕುಡಿದು ಗಂಟಲಲ್ಲಿ ಅರಗಿಸಿಕೊಂಡ ಸಮಾಜವಾಗಿದೆ. ಅಮೃತ ಕುಡಿದ್ರೆ ಸತ್ತೋಗ್ತೀವಿ, ಎಷ್ಟು ವಿಷ ಕೊಡ್ತೀರಾ ಕೊಡಿ ನೋಡೋಣ. ಹಿಂದೂ ಸಮಾಜ ಜಾತಿ ವಿಷ ಬೀಜ ತೆಗೆದು ಇನ್ನಷ್ಟು ಜಾಗೃತವಾಗಬೇಕು ಎಂದು ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: Actor Sudeep : ಸಿಸಿಎಲ್ ಕ್ರಿಕೆಟ್ ಮೂಡ್‌ನಲ್ಲಿ ಕಿಚ್ಚ ಸುದೀಪ್! ಶಾರ್ಜಾ ಸೇರಿದ ಅಭಿನಯ ಚಕ್ರವರ್ತಿ ..!

Related Video