
ಏನದು ಬೂದಿ ಮುಚ್ಚಿದ ಕೆಂಡದಂತಿರೋ ಪದ್ಮಲತಾ ಕೇಸ್? ತೆರೆದುಕೊಳ್ಳುತ್ತಾ ನಿಗೂಢ ರಹಸ್ಯ?
ಆ ಮುಸುಕುಧಾರಿ ಧರ್ಮಸ್ಥಳಕ್ಕೆ ಮತ್ತೆ ಬಂದಿದ್ದೇ ಬಂದಿದ್ದು, ದಿನಕ್ಕೊಂದು ಅಚ್ಚರಿ.. ದಿನಕ್ಕೊಂದು ತಿರುವು ಎದುರಾಗ್ತಲೇ ಇದೆ.. ನೂರಾರು ಸಾವುಗಳ ಮರುತನಿಖೆಯ ಬಳಿಕ, ಈಗ ಮತ್ತೊಂದು ಪ್ರಮುಖ ಪ್ರಕರಣದ ಕಡೆ ತಿರುಗಿದೆ.. ಆ ಪ್ರಕರಣಕ್ಕಿರೋದು, ಬರೋಬ್ಬರಿ 39 ವರ್ಷಗಳ ಇತಿಹಾಸ
ನನ್ನ ತಂಗಿಯ ಕೊ*ಲೆ ಆಗಿ 39 ವರ್ಷ ಆಗಿದೆ. ಇಲ್ಲಿಯವರೆಗೆ ನಮಗೆ ನ್ಯಾಯ ಸಿಕ್ಕಿಲ್ಲ. ಈ ಹಿಂದೆ ಸಿಐಡಿ ಅಧಿಕಾರಿಗಳು 'ಪತ್ತೆಹಚ್ಚಲಾಗದ ಕೇಸ್' ಎಂದು ಹಿಂಬರಹ ಕೊಟ್ಟಿದ್ದರು. ಆದರೆ, ನಮಗೆ ಈಗ ನ್ಯಾಯ ಬೇಕು ಅಂತ ಎಸ್ ಐಟಿ ಅಧಿಕಾರಿಗಳಿಗೆ ದೂರು ಕೊಟ್ಟಿದ್ದೇವೆ.