Prakash Raj on BJP: 420 ನಂಬರ್ ಇರೋರು 400 ಪ್ಲಸ್ ಬಗ್ಗೆ ಮಾತನಾಡ್ತಾರೆ, ಇದು ಅಹಂಕಾರ ತೋರಿಸುತ್ತೆ: ಪ್ರಕಾಶ್ ರಾಜ್

ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ. ಅದಕ್ಕೆ ಸಣ್ಣ ಪಕ್ಷಗಳನ್ನ ಒಡೆಯುವ, ಕೊಂಡುಕೊಳ್ಳುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ನಟ ಪ್ರಕಾಶ್‌ ರಾಜ್‌ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಚಿಕ್ಕಮಗಳೂರು: 420 ನಂಬರ್ ಇರೋರು 400 ಪ್ಲಸ್ ಬಗ್ಗೆ ಮಾತನಾಡ್ತಾರೆ. ಯಾವುದೇ ಪಕ್ಷವಾಗಲಿ ಅಲ್ಲಿ ಅವರ ಅಹಂಕಾರ ಕಾಣುತ್ತೆ. ನಾನು ತೆಗೆದುಕೊಳ್ತೀನಿ ಅನ್ನೋ ಅಹಂಕಾರ ನಿಂಗೆ ಎಲ್ಲಿ ಬರುತ್ತೆ ಎಂದು ಹೇಳುವ ಮೂಲಕ ಬಿಜೆಪಿ(BJP), ಮೋದಿ(Narendra Modi) ವಿರುದ್ಧ ನಟ ಪ್ರಕಾಶ್ ರಾಜ್(Actor Prakash Raj) ಕಿಡಿಕಾರಿದರು. ಆ ಮಾತಿನ ಅಹಂಕಾರ, ಅತೃಪ್ತತೆ ಜನರಿಗೆ ಕಾಣುತ್ತಿದೆ. ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ. ಅದಕ್ಕೆ ಸಣ್ಣ ಪಕ್ಷಗಳನ್ನ ಒಡೆಯುವ, ಕೊಂಡುಕೊಳ್ಳುತ್ತಿದ್ದಾರೆ. ಮಹಾಪ್ರಭುಗಳು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆಂಧ್ರದಲ್ಲಿ 3 ಪಕ್ಷಗಳ ಹಿಂದೆ ಅವರೇ ಇದ್ದಾರೆ. ಮಹಾಪ್ರಭುಗಳಿಗೆ 1% ಓಟು ಅಲ್ಲಿ, ಅದರಲ್ಲಿ ಬರಲ್ಲ ಅಂತ ಗೊತ್ತು. ಮೂರು ಪಕ್ಷಗಳನ್ನ ಇಟ್ಕೊಂಡ್ರೆ, ಆಳುವ ಪಕ್ಷ ಕೈನಲ್ಲಿ ಇಟ್ಕೊಂಡಿದ್ದಾರೆ. ಅವರಿಗೆ ಏನು ಸ್ಯಾಂಕ್ಷನ್ ಮಾಡಬೇಕು ಮಾಡಿದ್ದಾರೆ, ಅದರಲ್ಲಿ ಕಮಿಷನ್ ಬರ್ತಿದೆ. ಇಬ್ಬರು ಪ್ರಾದೇಶಿಕ ಪಕ್ಷದವರನ್ನ ಒಳಹಾಕಿಕೊಂಡಿದ್ದಾರೆ. ಅವನು 10, ಇವನು 12 ತೆಗೆದುಕೊಂಡರೆ ಕೊನೆಗೆ ಇವ್ರಿಗೆ ತಾನೇ ಎಂದು ಚಿಕ್ಕಮಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: Murder: ಉಜ್ಬೇಕಿಸ್ತಾನ್ ಬೆಡಗಿ ಬೆಂಗಳೂರಲ್ಲಿ ಮರ್ಡರ್..! ಆ ರಾತ್ರಿ ಹೋಟೆಲ್ ರೂಮ್‌ನಲ್ಲಿ ನಡೆದಿದ್ದೇನು..?

Related Video